Friday, August 19, 2022

Latest Posts

ಕಲಬುರಗಿಯಲ್ಲಿ ಮಂಗಳವಾರ ಹೊಸ 13 ಕೊರೋನಾ ಸೋಂಕು ಪತ್ತೆ

ಕಲಬುರಗಿ: ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದ ಕಲಬುರಗಿ ಜಿಲ್ಲೆಯ 13 ಜನರಲ್ಲಿ ಮಂಗಳವಾರ ಕೊರೋನಾ ಸೋಂಕು‌ ಪತ್ತೆಯಾಗಿದೆ. ಇದರಿಂದ‌ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 127ಕ್ಕೆ ಏರಿದೆ ಎಂದು ಡಿ.ಸಿ.ಶರತ್‌ ಬಿ. ತಿಳಿಸಿದ್ದಾರೆ. ಮುಂಬೈ ಪ್ರವಾಸ ಹಿನ್ನೆಲೆಯ ಆಳಂದ ತಾಲೂಕಿನ ದಂಗಾಪೂರ ಮೂಲದ 6 ವಷ೯ದ ಬಾಲಕಿ (P-1376), ಮತ್ತು 35 ವಷ೯ದ ಮಹಿಳೆಯಲ್ಲಿ (P-1377) ಅದೇ ರೀತಿ ಕಾಳಗಿ ತಾಲೂಕಿನ ಕೋಡ್ಲಿ ತಾಂಡಾ ಮೂಲದ 7 ವರ್ಷದ ಬಾಲಕ (P-1257), 32 ವರ್ಷದ ಯುವಕ (P-1262), 30 ವರ್ಷದ ಯುವತಿ (P-1266) ಮತ್ತು ಬುಗಡಿ ತಾಂಡಾ ಮೂಲದ 42 ವರ್ಷದ ಪುರುಷ (P-1258) ಹಾಗೂ 18 ವರ್ಷದ ಯುವತಿ (P-1259) ಕೊರೋನಾ‌ ಸೋಂಕು ಕಂಡುಬಂದಿದೆ.
ಕಾಳಗಿ ತಾಲೂಕಿನ ಅರಣಕಲ್ ತಾಂಡಾ ಮೂಲದ 8 ವರ್ಷದ ಬಾಲಕಿ (P-1260), 21 ವರ್ಷದ ಯುವತಿ (P-1263) ಹಾಗೂ 32 ವರ್ಷದ ಯುವಕನಿಗೆ (P-1267) ಕೊರೋನಾ‌ ಸೋಂಕು ಅಂಟುಕೊಂಡಿದೆ. ಚಿತ್ತಾಪುರ ತಾಲೂಕಿನ ನಾಲವಾರ ಮೂಲದ 35 ವರ್ಷದ ಮಹಿಳೆ (P-1261) ಮತ್ತು 40 ವರ್ಷದ ಪುರುಷ (P-1264) ರಲ್ಲಿಯೂ ಕೋವಿಡ್-19 ದೃಢವಾಗಿದೆ. ಇನ್ನೂ ಕಲಬುರಗಿಯ ಹಳೇ ಜೇವರ್ಗಿ ರಸ್ತೆಯ ಪಂಚಶೀಲ ನಗರದ 30 ವರ್ಷದ ಮಹಿಳೆಗೂ (P-1265) ಕೊರೋನಾ‌ ಸೋಂಕು ತಗುಲಿದೆ.13 ಜನ ಸೋಂಕಿತರ ಪೈಕಿ ಪಂಚಶೀಲ ನಗರದ 30 ವರ್ಷದ ಮಹಿಳೆ ಹೊರತುಪಡಿಸಿ ಉಳಿದೆಲ್ಲ ಕೊರೋನಾ ಸೋಂಕಿತರು ಕ್ವಾರಂಟೈನ್ ಸೆಂಟರ್‌ನಲ್ಲಿದ್ದವರಾಗಿದ್ದಾರೆ. ಸೋಂಕು ದೃಢವಾದ‌ ನಂತರ ಎಲ್ಲರನ್ನು ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ ಎಂಡು ಡಿ.ಸಿ. ಶರತ್‌ ಬಿ. ತಿಳಿಸಿದ್ದಾರೆ. ಒಟ್ಟಾರೆಯಾಗಿ ಮಂಗಳವಾರ 13 ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೊಂಕಿತರ ಸಂಖ್ಯೆ 127ಕ್ಕೆ ಎರಿದೆ.. ಉಳಿದಂತೆ 55 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. 7 ಜನ ನಿಧನ, ಉಳಿದ 65 ಜನರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!