Tuesday, August 16, 2022

Latest Posts

ಕಲಬುರಗಿಯಲ್ಲಿ ಮತ್ತೆ 7 ಕೊರೋನಾ ಸೋಂಕು ದೃಢ: ಡಿ‌.ಸಿ.ಶರತ್ ಬಿ.

ಕಲಬುರಗಿ: ಬುಧವಾರ ಮುಂಜಾನೆ ಬುಲೆಟಿನ್‌ನಲ್ಲಿ ಮಹಾರಾಷ್ಟ್ರ ರಾಜ್ಯದಿಂದ ವಲಸೆ ಬಂದ ಜಿಲ್ಲೆಯ 7 ಜನ ವಲಸಿಗರಲ್ಲಿ ಕೊರೋನಾ ಸೋಂಕು‌ ಪತ್ತೆಯಾಗಿದೆ. ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಯಡ್ರಾಮಿ ತಾಲೂಕಿನ ಹಂಗರಗಾ(ಕೆ) ಗ್ರಾಮದ 22 ವರ್ಷದ ಬಾಲಕ, ಸುಂಬಡ ಗ್ರಾಮದ 35 ವರ್ಷದ ಯುವಕ ಮತ್ತು 46 ವರ್ಷದ ಪುರುಷ, ಅರಳಗುಂಡಗಿಯ 25 ವರ್ಷದ ಯುವಕನಲ್ಲಿ‌ ಕೊರೋನಾ ಸೋಂಕು ಕಂಡುಬಂದಿದೆ.
ಜೇವರ್ಗಿ ತಾಲ್ಲೂಕಿನ ಯಾಳವಾರ ಗ್ರಾಮದ 22 ವರ್ಷದ ಯುವತಿಗೂ ಕೋವಿಡ್-19 ದೃಢವಾಗಿದೆ. ಇದಲ್ಲದೆ ಚಿತ್ತಾಪುರ ತಾಲ್ಲೂಕಿನ ಬಳವಡಗಿ ಗ್ರಾಮದ 26 ವರ್ಷದ ಯುವಕ ಮತ್ತು ಯಾಗಾಪುರದ 50 ವರ್ಷದ ವ್ಯಕ್ತಿಗೆ ಮಹಾಮಾರಿ ಸೋಂಕು ತಗುಲಿದೆ. ಯಾಳವಾರ‌ ಗ್ರಾಮದ ಯುವತಿ ಹೊರತುಪಡಿಸಿ ಉಳಿದ 6 ಜನ ಸರ್ಕಾರಿ ಕ್ವಾರಂಟೈನ್ ಸೆಂಟರ್‌ನಲ್ಲಿದ್ದವರಾಗಿದ್ದು, ಸೋಂಕು ದೃಢವಾದ‌ ನಂತರ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ‌ ನೀಡಲಾಗುತ್ತಿದೆ ಎಂದು ಡಿ.ಸಿ. ಶರತ್‌ ಬಿ. ತಿಳಿಸಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 134 ಕ್ಕೆ ಹೆಚ್ಚಳವಾಗಿದ್ದು, ಇದರಲ್ಲಿ 55 ಜನ ಗುಣಮುಖರಾಗಿದ್ದಾರೆ. ಉಳಿದಂತೆ 7 ಜನರು ನಿಧನಹೊಂದಿದ್ದು, 72 ಜನರಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ‌.ಸಿ.ಶರತ್ ಬಿ. ಮಾಹಿತಿ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss