Tuesday, July 5, 2022

Latest Posts

ಕಲಬುರಗಿಯಲ್ಲಿ ಮನೆ ಗೋಡೆ ಮೇಲೆ ಪಾಕ್ ಪರ ಬರಹ, ಪ್ರಧಾನಿಗೂ ಅವಾಚ್ಯ ಶಬ್ದ ಬಳಕೆ

ಕಲಬುರಗಿ: ನಗರದ ಸಾಥ ಗುಂಬಜ್ ಬಳಿಯ ಕಿಶನರಾವ್ ಹಾಗರಗುಂಡಗಿ ಮನೆಯ ಮೇಲೆ ಶನಿವಾರ ತಡರಾತ್ರಿ ದುಷ್ಕರ್ಮಿಗಳಿಂದ ಪಾಕಿಸ್ಥಾನ ಪರ ಘೋಷಣೆಯ ವಾಕ್ಯಗಳು ಹಾಗೂ ದೇಶದ ಪ್ರಧಾನಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ ಬರೆದ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಇದನ್ನು ಅರಿತ ಸಾರ್ವಜನಿಕರು ಹಾಗೂ ವಿವಿಧ ಸಂಘನೆಗಳ ಪ್ರಮುಖರು ಚೌಕ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ದಿವ್ಯಾ ಹಾಗರಗಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮನೆಯ ಗೋಡೆಯ ಮೇಲೆ ದೇಶದ್ರೋಹಿಗಳ ಕೆಲಸವನ್ನು ಮಾಡಿರುವವರ ವಿರುದ್ಧ ಕೂಡಲೇ ಕಠಿಣಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ದೇಶದಲ್ಲಿ ಇಂತಹ ಗಂಭೀರವಾದ ದೇಶದ್ರೋಹಿ ಕೃತ್ಯಗಳು ನಡೆಯುತ್ತಿದ್ದರು ಪೊಲೀಸ್ ಇಲಾಖೆ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಹಳೆಯ ಚೌಕ ಪೊಲೀಸ್ ಠಾಣೆಯಿಂದ ಪ್ರತಿಭಟನಾಕಾರರು ಪಾದಯಾತ್ರೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಜಿಲ್ಲೆಯಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿಲ್ಲ. ಇಂದು ಒಬ್ಬರ ಮನೆಯ ಗೋಡೆಯ ಮೇಲೆ ಬರೆದಿದ್ದಾರೆ, ನಾಳೆ ಜಿಲ್ಲೆಯಲ್ಲಿ ಎಲ್ಲ ಕಡೆಗೂ ಬರೆಯುತ್ತಾರೆ ಎಂಬ ಪ್ರತಿಭಟನಾಕಾರರ ಆಕ್ರೋಶಕ್ಕೆ ಈ ರೀತಿ ಆಗದಂತೆ ನೋಡಿಕೊಂಡು ಆರೋಪಿಗಳನ್ನು ಕೂಡಲೇ ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss