Monday, July 4, 2022

Latest Posts

ಕಲಬುರಗಿಯಲ್ಲಿ 11 ಸೆಂ.ಮೀ ಮಳೆ: ಹಾನಿಗೀಡಾದ ಪ್ರದೇಶಗಳ ಸರ್ವೇ ಮಾಡಿ ವರದಿ ಸಲ್ಲಿಸಿ: ಡಾ. ಎನ್.ವಿ. ಪ್ರಸಾದ

ಕಲಬುರಗಿ: ಕಲಬುರಗಿ ಮಹಾನಗರದಲ್ಲಿ ನಿನ್ನೆ 11 ಸೆಂ.ಮೀ.ನಷ್ಟು (110 ಮಿ.ಮೀ.) ಮಳೆಯಾಗಿದ್ದು, ಹಾನಿಯಾಗಿರುವ ಪ್ರದೇಶಗಳ ಸರ್ವೇ ಮಾಡಿ ಇವತ್ತೇ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಡಾ. ಎನ್.ವ್ಹಿ. ಪ್ರಸಾದ ಅವರು ಸೂಚಿಸಿದರು.
ಪ್ರಾದೇಶಿಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ತುರ್ತಾಗಿ ಕರೆದಿದ್ದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನಿನ್ನೆಯ ರೀತಿ ಇನ್ನೂ ಮಳೆಯಾಗುವ ಸಂಭವವಿದ್ದು, ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬುಲ್ಡೋಜರ್, ಹಿಟಾಚಿ ಹಾಗೂ ಕಾರ್ಮಿಕರನ್ನು ನಿಯೋಜಿಸಿ ಕೆಲಸ ನಿರ್ವಹಿಸಲು ಸಜ್ಜಾಗುವಂತೆ ಮಹಾನಗರ ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ಆರ್.ಪಿ.ಜಾಧವ ಅವರಿಗೆ ತಿಳಿಸಿದರು.
ನಿನ್ನೆಯ ಮಳೆಯಿಂದ ಹಾನಿಯಾಗಿರುವ ಪ್ರದೇಶಗಳ ಸರ್ವೇ ಮಾಡಿ ಅದರಲ್ಲಿ ಹಾನಿಯಾಗಿರುವ ಮನೆಗಳಲ್ಲಿ ವಾಸಿಸುತ್ತಿರುವ ಜನರನ್ನು ಸ್ಥಳಾಂತರ ಮಾಡಬೇಕು, ಅವರಿಗೆ ಕೂಡಲೇ ಪರಿಹಾರ ನೀಡುವ ಕೆಲಸವಾಗಬೇಕು ಹಾಗೂ ನಗರದಲ್ಲಿ ಈಗಾಗಲೇ ಬೀಳುವ ಸ್ಥಿತಿಯಲ್ಲಿರುವ ಮನೆ, ಕಟ್ಟಡ ಹಾಗೂ ಕಚೇರಿ ಕಟ್ಟಡಗಳನ್ನು ಗುರುತಿಸಿ, ಅಲ್ಲಿರುವ ಜನತೆ ಹಾಗೂ ಸಿಬ್ಬಂದಿಯನ್ನು ಸ್ಥಳಾಂತರಿಸಬೇಕು ಎಂದರು.ಈ ಸಂಬಂಧ ನಗರದ ಕೆಲವು ವಾರ್ಡಗಳನ್ನು ಒಳಗೂಡಿಸಿ, ವಲಯವಾರು ಒಂದು ತಂಡ ರಚಿಸಿ ತುರ್ತಾಗಿ ಕೆಲಸಗಳ ಕೈಗೊಳ್ಳಬೇಕು ಎಂದು ಹೇಳಿದರು.ಮಳೆಯ ಸಂದರ್ಭದಲ್ಲಿ ಜನರಿಗೆ ಅನುಕೂಲವಾಗುವಂತೆ ಹೆಲ್ಪ್ಪ್‍ಡೆಸ್ಕ್ ರಚಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಅವರು ಸಲಹೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss