Thursday, August 11, 2022

Latest Posts

ಕಲಬುರಗಿಯಿಂದ ತಿರುಪತಿಗೆ ವಿಮಾನಯಾನಕ್ಕೆ ಸಂಸದ ಡಾ. ಉಮೇಶ ಜಾಧವ ಚಾಲನೆ

ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿಯಿಂದ ತಿರುಪತಿಗೆ ಹೊರಡುವ ವಿಮಾನಯಾನಕ್ಕೆ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಸೋಮವಾರ ಕಲಬುರಗಿಯ ವಿಮಾನ ನಿಲ್ದಾಣದಲ್ಲಿ ಜ್ಯೋತಿ ಬೆಳೆಗಿಸುವ ಮೂಲಕ ಚಾಲನೆ ನೀಡಿದರು.
ಉಡಾನ್ ಯೋಜನೆಯಡಿ ಸ್ಟಾರ್ ಇಂಡಿಯಾ ಸಂಸ್ಥೆಯ ವಿಮಾನವು ಸೋಮವಾರ, ಬುಧವಾರ, ಶುಕ್ರವಾರ, ಮತ್ತು ಭಾನುವಾರ ವಾರದ ನಾಲ್ಕು ದಿನ ಹಾರಾಟ ನಡೆಸಲಿದ್ದು, 50 ಜನ ಸಾಮಥ್ರ್ಯವುಳ್ಳ ವಿಮಾನವು ತನ್ನ ಮೊದಲ ಹಾರಾಟದಲ್ಲಿ 41 ಜನರೊಂದಿಗೆ ತಿರುಪತಿಗೆ ಪ್ರಯಾಣ ಬೆಳೆಸಿತು.
ಈ ಕಾರ್ಯಕ್ರಮದಲ್ಲಿ ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ, ಹೆಚ್.ಕೆ.ಸಿ.ಸಿ.ಐ. ನ ನಿರ್ದೇಶಕ ಅಮರನಾಥ ಪಾಟೀಲ, ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರರಾವ ಹಾಗೂ ಸ್ಟಾರ್ ಏರ್ ಇಂಡಿಯಾದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss