ಕಲಬುರಗಿ: ಕಲಬುರಗಿಯಲ್ಲಿ ಕೋರೋನಾ ಸೋಂಕಿನಿಂದ ಗುಣಮುಕ್ತರಾಗಿ ಮಂಗಳವಾರ ಮತ್ತೆ ಇಬ್ಬರು ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಕಲಬುರಗಿ ನಗರದ ಮಿಲನ್ ಚೌಕ್ ಪ್ರದೇಶದ 35 ವರ್ಷದ ಮಹಿಳೆ (P-609) ಮತ್ತು ಮೋಮಿನಪುರ ಪ್ರದೇಶದ 36 ವರ್ಷದ ಮಹಿಳೆ (P-641) ಆಸ್ಪತ್ರೆಯಿಂದ ಬಿಡುಗಡೆ ಹೊಂದಿದವರು. ಇದೂವರೆಗೆ ಕೊರೋನಾ ಪೀಡಿತ 127ರಲ್ಲಿ 55 ಜನ ಗುಣಮುಖರಾಗಿದ್ದಾರೆ.