Monday, July 4, 2022

Latest Posts

ಕಲಬುರಗಿ| ಕೊರೋನಾ ಸೋಂಕಿನಿಂದ 80 ವರ್ಷದ ಹಿರಿಯ‌ ಜೀವಿಗಳು ಗುಣಮುಖ

ಕಲಬುರಗಿ: ಬುಧವಾರ ಕಲಬುರಗಿ‌ ಜಿಲ್ಲೆಯಲ್ಲಿ ಇಬ್ಬರು 80 ವರ್ಷದ ಹಿರಿಯ ಜೀವಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಕಲಬುರಗಿ ನಗರದ ಸರಫ್ ಬಜಾರ್ (ಪುಟಾಣಿ ಗಲ್ಲಿ) ಪ್ರದೇಶದ 80 ವರ್ಷದ ವೃದ್ಧೆ (P-983) ಹಾಗೂ ಅಫಜಲಪೂರ ತಾಲೂಕಿನ ಅಳಗಿ (ಬಿ) ಗ್ರಾಮದ 80 ವರ್ಷದ ವೃದ್ಧ (P-1039) ಕೊರೋನಾ ವಿರುದ್ಧ ಹೋರಾಡಿ ಗುಣಮುಖರಾದವರು

ಇದರಿಂದ ಕೊರೋನಾ‌ ಪೀಡಿತ 185 ಜನರಲ್ಲಿ 75 ಜನ ಗುಣಮುಖರಾಗಿದ್ದಾರೆ. 7 ಜನ‌ ನಿಧನ ಹೊಂದಿದ್ದು, 103 ಜನರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss