Thursday, July 7, 2022

Latest Posts

ಕಲಬುರಗಿ| ಕೊರೋನಾ ಸೋಂಕಿನಿಂದ ಮತ್ತಿಬ್ಬರು ಗುಣಮುಖ

ಕಲಬುರಗಿ:ಗುರುವಾರ ಕಲಬುರಗಿ ನಗರದಲ್ಲಿ ಮತ್ತಿಬ್ಬರು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.
ಕಲಬುರಗಿ ನಗರದ ಮೋಮಿನಪುರ ಪ್ರದೇಶದ 4.6 ವರ್ಷದ ಹೆಣ್ಣು ಮಗು (P-525) ಮತ್ತು ಜೆ.ಆರ್.ನಗರದ 35 ವರ್ಷದ ಯುವತಿ (P-558) ಗುಣಮುಖರಾದವರು.
ಇದರಿಂದ ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 83 ರೋಗಿಗಳಲ್ಲಿ 46 ರೋಗಿಗಳು ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. 7 ಜನ ನಿಧನ‌ರಾಗಿದ್ದು, ಉಳಿದಂತೆ 30 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss