Tuesday, August 16, 2022

Latest Posts

ಕಲಬುರಗಿ| ಗಂಡೋರಿ‌ ನಾಲಾ ಆಣೆಕಟ್ಟಿನಿಂದ 20000 ಕ್ಯುಸೆಕ್ ನೀರು ಬಿಡುಗಡೆ

ಕಲಬುರಗಿ: ಚಿಂಚೋಳಿ ತಾಲೂಕಿನ ಗಂಡೋರಿ ನಾಲಾ ಆಣೆಕಟ್ಟು ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಿದ್ದು, ಗುರುವಾರ ಮುಂಜಾಗ್ರತಾ ಕ್ರಮವಾಗಿ ಆಣೆಕಟ್ಟಿನ ಕೋಡಿ ಮುಖಾಂತರ 20000 ಕ್ಯುಸೆಕ್ ನೀರು ನಾಲಾಗೆ ಹರಿಸಲಾಗಿದೆ ಎಂದು ಕೆ.ಎನ್.ಎನ್.ಎಲ್. ಕಲಬುರಗಿ ವಿಭಾಗ-1ರ ಕಾರ್ಯಪಾಲಕ ಅಭಿಯಂತ ಸೂರ್ಯಕಾಂತ ಮಾಲೆ ತಿಳಿಸಿದ್ದಾರೆ.
ಆದರಿಂದ ನಾಲಾ ಕೆಳಪಾತ್ರದಲ್ಲಿ ಬರುವ ಗ್ರಾಮಗಳ ಸಾರ್ವಜನಿಕರು ನಾಲಾ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು. ನಾಲಾದಲ್ಲಿ ಈಜಬಾರದು ಎಂದು ಪ್ರದೇಶದ ರೈತರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.
ಮುಂದಿನ ದಿನದಲ್ಲಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬರುವ ಸಾಧ್ಯತೆ ಇದ್ದು, ಆಗ ನೀರಿನ ಒಳಹರಿವು ಇನ್ನು ಹೆಚ್ಚಲಿದೆ. ಹೀಗೆ ಹೆಚ್ಚಿಗೆ ಬಂದ ನೀರನ್ನು ನಾಲಾಗೆ ಬಿಡಲಾಗುತ್ತದೆ. ಸಣ್ಣ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ನಾಲಾ ಸಮೀಪದ ಸರ್ಕಾರದ ಆಸ್ತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss