ಕಲಬುರಗಿ: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಮತ್ತೆ ಮೂವರು ನಿಧನರಾಗಿರುವ ಬಗ್ಗೆ ಬುಧವಾರ ದೃಢವಾಗಿದ್ದು,
ಇದರಿಂದ ಕೊರೋನಾ ಸೋಂಕಿಗೆ ಇದೂವರೆಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 145ಕ್ಕೆ ಏರಿಕೆಯಾಗಿದೆ. ಅದರಂತೆ ಬುಧವಾರ 144 ಕೊರೋನಾ ಪಾಸಿಟಿವ್ ವರದಿಗಳು ದೃಡವಾಗಿದ್ದು, ಸೊಂಕಿತರ ಸಂಖ್ಯೆ ಒಟ್ಟು 7837ಕ್ಕೆ ಎರಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಚಿಂಚೋಳಿ ಪಟ್ಟಣದ ಮೋಮಿನಪುರ ಪ್ರದೇಶದ 65 ವರ್ಷದ ವೃದ್ಧ (P-39223) ಆ.9 ರಂದು ಆಸ್ಪತ್ರೆಗೆ ದಾಖಲಾಗಿ ಆ.10 ರಂದಯ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಕಮಲಾಪುರ ತಾಲೂಕಿನ ಸಲಗರ ಗ್ರಾಮದ 60 ವರ್ಷದ ವೃದ್ಧ (P-158181) ಆ.1 ರಂದು ಖಾಸಗಿ ಅಸ್ಪತ್ರೆಗೆ ದಾಖಲಾಗಿ ಆ.12 ರಂದು ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಅಣ್ಣೆಮ್ಮ ನಗರದ 75 ವರ್ಷದ ವೃದ್ಧ (P-188418) ಆ.9 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು. 334 ಜನರು ಬಿಡುಗಡೆ ಹೊಂದಿದಾರೆ.