ಕಲಬುರಗಿ: ನಿರಂತರ ಮಳೆಯಿಂದ ಜಿಲ್ಲೆಯ ಪ್ರಮುಖ ಹೆದ್ದಾರಿಗಳು ನೀರಿನಿಂದ ಜಲಾವೃತಗೊಂಡಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಸಮೀಪವಿರುವ ಕಾಗಿಣಾ ನದಿಯ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ.
ಇದೇ ಮಾರ್ಗವಾಗಿ ಪ್ರತಿನಿತ್ಯ ನೂರಾರು ವಾಹನಗಳು ಕಲಬುರಗಿ, ಹೈದರಾಬಾದ್ಗೆ ತೆರಳುತ್ತಿದ್ದವು. ಮಂಗಳವಾರ ತಡರಾತ್ರಿ ತುಂಬಿ ಹರಿದ ಕಾಗಿಣಾ ನದಿಯಿಂದ ಕಲಬುರಗಿಗೆ ಸಂಪರ್ಕ ಕಡಿತಗೊಂಡಿದೆ. ಮುಳುಗಿದ ಕಾಗಿಣಾ ಬ್ರಿಡ್ಜ್ಇದರಿಂದ ಕಂಗಾಲಾದ ವಾಹನ ಸವಾರರು ಪರ್ಯಾಯ ಮಾರ್ಗ ಹುಡುಕುವಲ್ಲಿ ತಲ್ಲೀನರಾಗಿದ್ದಾರೆ.
ಧಾರಾಕಾರ ಮಳೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಸಹ ನೀರಿನಿಂದ ಮುಳುಗಿದ್ದು, ಪಯಾ೯ಯವಿಲ್ಗದೆ ವಾಹನ ಸವಾರರು ಕೆಲಸಕ್ಕೆ ಹೋಗುವವರು ಪ್ರಾಣದ ಹಂಗನ್ನು ತೊರೆದು ತಮ್ಮ ದಿನ ನಿತ್ಯದ ಕೆಲಸ ಕಾಯ೯ಗಳನ್ನು ಮಾಡುತ್ತಿದ್ದಾರೆ.