ಕಲಬುರಗಿ: ಜಿಲ್ಲೆಯಲ್ಲಿ ರವಿವಾರ ಮತ್ತೆ ನಾಲ್ಕು ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 71ಕ್ಕೆ ಏರಿದೆ. ತೀವ್ರ ಉಸಿರಾಟ ತೊಂದರೆ (SARI) ಹಿನ್ನೆಲೆಯಿಂದ ಅಫಜಲಪುರ ಪಟ್ಟಣದ ನಿವಾಸಿ 35 ವರ್ಷದ ಯುವಕನಿಗೆ, ಮಹಾರಾಷ್ಟ್ರ ಪ್ರವಾಸ ಹಿನ್ನೆಲೆಯ ಕಮಲಾಪುರದ 30 ವರ್ಷದ ಯುವಕ ಹಾಗೂ ಕಲಬುರಗಿ ನಗರದ ರೋಗಿ ಸಂಖ್ಯೆ-604 ಸಂಪರ್ಕದಲ್ಲಿ ಬಂದ ನಗರದ ಮೋಮಿನಪುರ ಪ್ರದೇಶದ 72 ವರ್ಷದ ವೃದ್ಧನಿಗೆ ಹಾಗೂ 35 ವಷ೯ದ ಪುರುಪನಿಗೆ ಕೋವಿಡ್-19 ಸೋಂಕು ತಗುಲಿದೆ.
ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಪತ್ತೆಯಾದ 71ಕೊರೋನಾ ಸೋಂಕಿತರಲ್ಲಿ ಒಟ್ಟು 31 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 6 ಜನ ನಿಧನ ಹೊಂದಿದ್ದು, 34 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ. ಶರತ ತಿಳಿಸಿದ್ದಾರೆ