ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಮತದಾನ ಸಾಗಿದ್ದು, ಕಲಬುರಗಿ ನಗರದಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಮತಗಟ್ಟೆಯಲ್ಲಿ ಮತದಾರರು (ಶಿಕ್ಷಕರು ) ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.
ನಗರದ ನೂತನ ವಿದ್ಯಾಲಯ ಕನ್ಯಾ ಫ್ರೌಢ ಶಾಲೆ, ಗಂಜ ಪ್ರದೇಶದ ನಗರೇಶ್ವರ ಶಾಲೆ ಸೇರಿದಂತೆ ಶಿಕ್ಷಕ ಮತದಾರರು ಮತ ಚಲಾಯಿಸಿದರು. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮಧ್ಯಾಹ್ನದ 2ರ ವರೆಗೆ ಶೇ 54.84ರಷ್ಟು ಮತದಾನವಾಗಿದೆ.
ಡಿಸಿ ಭೇಟಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಮತದಾನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಬುಧವಾರ ಕಲಬುರಗಿ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.
ನಗರದ ಮತಗಟ್ಟೆ ಸಂಖ್ಯೆ 66,67ಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.