Thursday, June 30, 2022

Latest Posts

ಕಲಬುರಗಿ ಜಿಲ್ಲೆಯಲ್ಲಿ ವರುಣನ ಆಭ೯ಟ: ನಗರದ ರಸ್ತೆಗಳೆಲ್ಲಾ ಜಲಾವೃತ

ಕಲಬುರಗಿ: ನಗರವೂ ಸೇರಿದಂತೆ ಜಿಲ್ಲೆಯ ಅಫಜಲಪುರ, ಚಿತ್ತಾಪುರ, ಚಿಂಚೋಳಿ ಹಾಗೂ ಕಾಳಗಿ ತಾಲ್ಲೂಕಿನ ವಿವಿಧೆಡೆ ಶನಿವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಅದರಂತೆ ಭಾನುವಾರ ಬೆಳಿಗ್ಗೆಯಿಂದಲೇ ಮೊಡ ಕವಿದ ವಾತಾವರಣ ಇದ್ದಿರುವುದರಿಂದ ಮಧ್ಯಾಹ್ನ 4 ಗಂಟೆ ಸುಮಾರಿಗೂ ಒಂದು ತಾಸೂ ಬಿಡುವಿಲ್ಲದೆ ಮಳೆ ಸುರಿದಿದೆ.
ನಗರದಲ್ಲಿ ಶನಿವಾರ ರಾತ್ರಿ 8ರ ಸುಮಾರಿಗೆ ಆರಂಭವಾದ ಮಳೆ ಅರ್ಧ ತಾಸು ಸುರಿಯಿತು. ಇಲ್ಲಿನ ಆರ್‌.ಜಿ. ನಗರ, ಸೇಡಂ ರಸ್ತೆ, ವೀರೇಂದ್ರ ಪಾಟೀಲ ಬಡಾವಣೆ, ಉದನೂರು ರಸ್ತೆ, ಪೂಜಾ ಕಾಲೊನಿ, ಮಾಣಿಕೇಶ್ವರಿ ನಗರ, ಶಕ್ತಿನಗರ, ಪ್ರಶಾಂತ ನಗರ, ತಾರಪೈಲ್‌ ಬಡಾವಣೆ, ಬ್ರಹ್ಮಪುರ ಮುಂತಾದೆಡೆ ರಸ್ತೆಯಲ್ಲಿ ನೀರು
ಹರಿಯಿತು.
ಕಳೆದೊಂದು ವಾರದಿಂದ ಬಿಡುವು ನೀಡಿದ್ದ ಮಳೆ ಶನಿವಾರ ರಾತ್ರಿ ಏಕಾಏಕಿ ಸುರಿಯಲಾರಂಭಿಸಿತು. ಬೆಳಿಗ್ಗೆ 11ರಿಂದಲೇ ಬಿಸಿಲಿನ ಝಳ ಹೆಚ್ಚಾಗಿತ್ತು. ಸಂಜೆ 6ರು ಸುಮಾರಿಗೆ ಮೋಡ ಕವಿದುಕೊಂಡು, ನಂತರ ಹನಿಯೊಡೆಯಿತು.
1124 ಕ್ಯುಸೆಕ್‌ ನೀರು ಹೊರಕ್ಕೆ: ಚಿಂಚೋಳಿ ಪಟ್ಟಣ, ತಾಲ್ಲೂಕಿನ ನಿಡಗುಂದಿ, ರಾಯಕೋಡ ಹಾಗೂ ಕಾಳಗಿ ತಾಲ್ಲೂಕಿನ ರಟಕಲ್‌ ಗ್ರಾಮಗಳ ಸುತ್ತ ಸಂಜೆ 6ರಿಂದಲೇ ರಭಸದ ಮಳೆ ಸುರಿಯಿತು.
ಇದರಿಂದಾಗಿ ನಾಗರಾಳ ಜಲಾಶಯ ಪೂರ್ಣ ಭರ್ತಿಯಾಗಿದೆ. 336 ಕ್ಯುಸೆಕ್‌ ನೀರು ನಿರಂತವಾಗಿ ಒಳಹರಿವು ಇದೆ. ಆದ್ದರಿಂದ ಜಲಾಶಯದಿಂದ 1124 ಕ್ಯುಸೆಕ್‌ ನೀರನ್ನು ಹೊರ ಹರಿಸಲಾಗುತ್ತಿದೆ. ಅದೇ ರೀತಿ ಚಿತ್ತಾಪುರ ಪಟ್ಟಣ, ಕಾಳಗಿ ತಾಲ್ಲೂಕಿನ ಬಹುಪಾಲು ಕಡೆ ತಡರಾತ್ರಿಯವರೆಗೂ ಮಳೆ ಮುಂದುವರಿದಿತ್ತು.
ಮಳೆಗೆ ಬೆಳೆ ಹಾನಿ: ಪಶ್ಚಿಮ ಬಂಗಾಳದಲ್ಲಿ ವಾಯುಭಾರ ಕುಸಿತದಿಂದ ಅಫಜಲಪುರ ತಾಲ್ಲೂಕಿನ ಅಲ್ಲಲ್ಲಿ ಶನಿವಾರ ಸಂಜೆ 6 ಗಂಟೆಯಿಂದ ಆರಂಭವಾದ ಧಾರಾಕಾರ ತಡರಾತ್ರಿ 12ರವರೆಗೂ ಒಂದೇ ಸಮನೆ ಸುರಿಯಿತು.
ಸುಮಾರು ಒಂದು ತಿಂಗಳಿಂದ ಮಳೆಯಿಲ್ಲದೆ ಒಂದು ಕಡೆ ಬೆಳೆಗಳು ಬಾಡುತ್ತಿದ್ದವು. ಇನ್ನೊಂದು ಕಡೆ ಅಕಾಲಿಕ ಮಳೆಯಿಂದ ತೊಗರಿ ಮತ್ತು ಹತ್ತಿ ಹೂವುಗಳು ಉದರುತ್ತಿವೆ. ಅಲ್ಲಲ್ಲಿ ಸೂರ್ಯಕಾಂತಿ ರಾಶಿ ಮಾಡಲು ಅನಾನುಕೂಲ ಆಗಿದೆ. ಹಿಂಗಾರು ಬಿತ್ತನೆಗೆ ಸಜ್ಜಾಗುತ್ತಿರುವಾಗಲೇ ಮಳೆ ಬಂದಿರುವುದು ಅನುಕೂಲವಾಗಿದೆ ಎಂದು ರೈತರು ಹೇಳುತ್ತಾರೆ. ತಿಂಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದ ತೊಗರಿ, ಹತ್ತಿ ಬೆಳೆಗಳು ಹಾಳಾಗಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss