Thursday, February 25, 2021

Latest Posts

ಕಲಬುರಗಿ ಜಿಲ್ಲೆಯಲ್ಲಿ 144 ಮಂದಿಗೆ ಪಾಸಿಟಿವ್, ಆರು ಜನ ಬಲಿ

ಕಲಬುರಗಿ: ಕೊರೋನಾ ಸೋಂಕಿನಿಂದ ಜಿಲ್ಲೆಯಲ್ಲಿ ಮತ್ತೆ ಆರು ಜನ ನಿಧನರಾಗಿರುವ ಬಗ್ಗೆ ಶುಕ್ರವಾರ ದೃಢವಾಗಿದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಇದೂವರೆಗೆ ಮೃತರಾದವರ ಸಂಖ್ಯೆ 95ಕ್ಕೆ ಏರಿಕೆಯಾಗಿದೆ ಹಾಗೇ ಶುಕ್ರವಾರ 144 ಪಾಸಿಟಿವ್   ವರದಿಯಾಗಿದ್ದು, ಸೊಂಕಿತರ ಸಂಖ್ಯೆ 5310ಕ್ಕೆ ಎರಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ತೀವ್ರ ಉಸಿರಾಟ ತೊಂದರೆ ಜೊತೆಗೆ ಗರ್ಭಧಾರಣೆಯ ಅಧಿಕ ರಕ್ತದೊತ್ತಡದಿಂದ ಕಲಬುರಗಿಯ ಭವಾನಿ ನಗರದ 52 ವರ್ಷದ ಮಹಿಳೆ (P-77573) ಜು.22 ರಂದು ಆಸ್ಪತ್ರೆಗೆ ದಾಖಲಾಗಿ ಜು.29 ರಂದು ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಅಫಜಲಪೂರ ತಾಲೂಕಿನ ಕರಜಗಿ ಗ್ರಾಮದ 59 ವರ್ಷದ ಪುರುಷ (P-93743) ಜು.16 ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದು, ಶುಕ್ರವಾರ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.
ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಓಂ ನಗರ ಪ್ರದೇಶದ 76 ವರ್ಷದ ವೃದ್ಧ (P- 94855) ಜು.26 ರಂದು ಆಸ್ಪತ್ರೆಗೆ ದಾಖಲಾಗಿ ಜು.27 ರಂದು ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಶಹಾಬಾದ ಪಟ್ಟಣದ 85 ವರ್ಷದ ವೃದ್ಧ (P-113035) ಜು.26 ರಂದು ಆಸ್ಪತ್ರೆಗೆ ದಾಖಲಾಗಿ ಜು.27 ರಂದು ನಿಧನ ಹೊಂದಿದ್ದಾರೆ.
ಐ.ಎಲ್.ಐ. ಹಿನ್ನೆಲೆಯೊಂದಿಗೆ ಕಲಬುರಗಿ ನಗರದ ಪೂಜಾ ಕಾಲೋನಿಯ 64 ವರ್ಷದ ವೃದ್ಧ (P-115850) ಜು.26 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಸಿ.ಐ.ಬಿ.ಕಾಲೋನಿ ಪ್ರದೇಶದ 69 ವರ್ಷದ ವೃದ್ಧ (P-115861) ಜು.26 ರಂದು ಆಸ್ಪತ್ರೆಗೆ ದಾಖಲಾಗಿ ಜು.27 ರಂದು ನಿಧನ ಹೊಂದಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!