Sunday, June 26, 2022

Latest Posts

ಕಲಬುರಗಿ| ತಾಯಿ-ಮಗು ಸೇರಿ ಕೊರೋನಾ ಸೋಂಕಿನಿಂದ ಮತ್ತೆ ಮೂವರು ಗುಣಮುಖ

ಕಲಬುರಗಿ: ಕಲಬುರಗಿ ನಗರದಲ್ಲಿ ‌ತಾಯಿ-ಮಗು ಸೇರಿದಂತೆ ಮತ್ತೆ ಮೂವರು ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ನಗರದ ಮೋಮಿನಪುರ ಪ್ರದೇಶದ 26 ವರ್ಷದ ಮಹಿಳೆ (ರೋಗಿ ಸಂಖ್ಯೆ-425) ಹಾಗೂ ಇವರ ನಾಲ್ಕು ತಿಂಗಳ ಗಂಡು ಮಗು (ರೋಗಿ ಸಂಖ್ಯೆ-424) ಹಾಗೂ ಮಾಣಿಕೇಶ್ವರಿ ನಗರದ 46 ವರ್ಷದ ಮಹಿಳೆ (ರೋಗಿ ಸಂಖ್ಯೆ-421) ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಅವರು ತಿಳಿಸಿದ್ದಾರೆ.
ಈ ಮೂವರಿಗೂ ಏ.22ರಂದು ಕೊರೋನಾ ಸೋಂಕು ದೃಢವಾಗಿದ್ದರಿಂದ ಚಿಕಿತ್ಸೆಗೆ ದಾಖಲಾಗಿಸಿತ್ತು. ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಪತ್ತೆಯಾದ 64 ಕೊರೋನಾ‌ ಸೋಂಕಿತರಲ್ಲಿ ಒಟ್ಟು 27 ರೋಗಿಗಳು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 6 ಜನ ನಿಧನ ಹೊಂದಿದ್ದು, 31 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss