ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, June 21, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಲಬುರಗಿ: ದಾಸ್ತಾನು ಮಾಡಿಡಲಾದ ತೊಗರಿ ನಾಶ

ಕಲಬುರಗಿ: ವಾಯುಭಾರ ಕುಸಿತದಿಂದ ಭಾರಿ ಮಳೆಯಾದ ಹಿನ್ನಲೆಯಲ್ಲಿ ಜಿಲ್ಲೆಯ ಚಿಂಚೋಳಿಯ ಬೀಜೋತ್ಪಾದನಾ ಕೇಂದ್ರದಲ್ಲಿರುವ  ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಉಗ್ರಾಣಕ್ಕೆ ಮಳೆ ಮತ್ತು ಪ್ರವಾಹದ ನೀರು ನುಗ್ಗಿದ್ದು, ಅಲ್ಲಿ ದಾಸ್ತಾನು ಮಾಡಲಾಗಿದ್ದ ಕೆಂಪು ಮತ್ತು ಬಿಳಿ ತೊಗರಿ ಸಂಪೂರ್ಣ ನಾಶವಾಗಿ ಹೋಗಿವೆ.
ಭಾರಿ ಮಳೆ ಜೊತೆಗೆ ನಾಗರಾಳ ಮತ್ತು ಚಂದ್ರಂಪಳ್ಳಿ ಜಲಾಶಯಗಳಿಂದ  ನದಿಗೆ  ಬಿಡಲಾಗಿರುವ ಹೆಚ್ಚುವರಿ ಪ್ರವಾಹದ ನೀರು ನುಗ್ಗಿದೆ. ರೈತರಿಂದ ಬೆಂಬಲ ಬೆಲೆಗೆ ಖರೀದಿಸಿ ಉಗ್ರಾಣದಲ್ಲಿ  ದಾಸ್ತಾನು ಮಾಡಲಾಗಿದ್ದ 50 ಕೆಜಿ ಗಾತ್ರದ 8000 ಕೆಂಪು ಮತ್ತು ಬಿಳಿ ತೊಗರಿ ಚೀಲಗಳು ನೀರಿನಿಂದ ಹಾಳಾಗಿವೆ.
ಒಟ್ಟಾರೆ 4 ಸಾವಿರ ಕ್ವಿಂಟಲ್ ತೊಗರಿ ಹಾಳಾಗಿದ್ದು, ರೂ,2.50 ಕೋಟಿ ನಷ್ಟ ಉಂಟಾಗಿದೆ.
ನಫೇಡ್ ಪ್ರಾದೇಶಿಕ ವ್ಯವಸ್ಥಾಪಕರು ಮತ್ತು ಚಿಂಚೋಳಿ ಠಾಣೆಯ ಎಸ್ಐ ರಾಜಶೇಖರ ರಾಠೋಡ ಅವರು ಶುಕ್ರವಾರ ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss