Thursday, July 7, 2022

Latest Posts

ಕಲಬುರಗಿ-ದೆಹಲಿ ವಿಮಾನ ಹಾರಾಟಕ್ಕೆ ಸಂಸದ ಡಾ.ಉಮೇಶ ಜಾಧವ ಚಾಲನೆ

ಹೊಸ ದಿಗಂತ ವರದಿ, ಕಲಬುರಗಿ:

ನಗರದ ವಿಮಾನ ನಿಲ್ದಾಣದಿಂದ ವಾರದಲ್ಲಿ ‌ಮೂರು ದಿನ ದೆಹಲಿ (ಹಿಂಡನ್)ಗೆ ವಿಮಾನ ಸಂಚಾರವನ್ನು ಸ್ಟಾರ್ ಏರ್ ವಿಮಾನಯಾನ ಸಂಸ್ಥೆ ಆರಂಭಿಸಿದೆ.
ಪ್ರತಿ ಮಂಗಳವಾರ, ಬುಧವಾರ ಹಾಗೂ ಶನಿವಾರ ಸಂಚಾರ ಕೈಗೊಳ್ಳಲಿದ್ದು, ಸಂಸದ ಡಾ.ಉಮೇಶ ಜಾಧವ ಬುಧವಾರ ಬೆಳಿಗ್ಗೆ ಇಲ್ಲಿ‌ನ ವಿಮಾನ ನಿಲ್ದಾಣದಲ್ಲಿ ಸಂಚಾರಕ್ಕೆ ‌ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಾಧವ, ಉದ್ಘಾಟನೆಯಾದ ಒಂದು ವರ್ಷದಲ್ಲೇ ಕಲಬುರಗಿ ವಿಮಾನ ನಿಲ್ದಾಣವು ದೇಶದಲ್ಲೇ ಅತ್ಯಂತ ಹೆಚ್ಚು ‌ಸಕ್ರಿಯ ನಿಲ್ದಾಣ ‌ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರಸ್ತುತ ‌ಇಲ್ಲಿಂದ ಬೆಂಗಳೂರು, ದೆಹಲಿಗೆ ವಿಮಾನ ಸಂಚಾರ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ಕಲಬುರಗಿ- ಹೈದರಾಬಾದ್, ಮುಂಬೈ, ತಿರುಪತಿಗೆ ಸಂಚಾರ ಆರಂಭಿಸಲಾಗುವುದು ಎಂದರು.
ಶಾಸಕ ಬಸವರಾಜ ‌ಮತ್ತಿಮೂಡ, ವಿಧಾನಪರಿಷತ್ ‌ಸದಸ್ಯ‌ ಬಿ.ಜಿ.ಪಾಟೀಲ, ವಿಮಾನ ನಿಲ್ದಾಣ ನಿರ್ದೇಶಕ ‌ಎಸ್. ಜ್ಞಾನೇಶ್ವರರಾವ್,
ಬಿಜೆಪಿ ಗ್ರಾಮಾಂತರ ‌ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಹಾನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ ಇದ್ದರು.
ವಾರದಲ್ಲಿ ‌ಮೂರು ದಿನ ಬೆಳಿಗ್ಗೆ 10.20ಕ್ಕೆ ಇಲ್ಲಿಂದ ಹೊರಟು ಮಧ್ಯಾಹ್ನ 12.40ಕ್ಕೆ ಹಿಂಡನ್ ತಲುಪಲಿದೆ. ಮಧ್ಯಾಹ್ನ 1.10ಕ್ಕೆ ಹಿಂಡನ್ ನಿಂದ ಹೊರಟು ಮಧ್ಯಾಹ್ನ 3.30ಕ್ಕೆ ಕಲಬುರ್ಗಿ ತಲಪಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss