ಕಲಬುರಗಿ| ನಗರದ ಮತ್ತಿಬ್ಬರು ಕೊರೋನಾ ಸೋಂಕಿತರು ಗುಣಮುಖ: ಡಿ.ಸಿ. ಶರತ್ ಬಿ.

0
48

ಕಲಬುರಗಿ:  ಅರೋಗ್ಯ ಇಲಾಖೆಯು ಶುಕ್ರವಾರ ಸಂಜೆ ಹೊರಡಿಸಿರುವ ಬುಲೆಟಿನ್ ನಲ್ಲಿ ಕಲಬುರಗಿ ನಗರದ ಮತ್ತಿಬ್ಬರು ಕೊರೋನಾ ಸೋಂಕಿತರು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕಲಬುರಗಿ ನಗರದ ಮೋಮಿನಪುರ ಪ್ರದೇಶದ 41 ವರ್ಷದ ಪುರುಷ (P-604) ಮತ್ತು ಗಾಜೀಪುರ ಪ್ರದೇಶದ 52 ವರ್ಷದ ಪುರುಷ (P-679) ಮಹಾಮಾರಿ ಕೊರೋನಾ ರೋಗದಿಂದ ವಾಸಿಯಾದವರು.
ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ‌ ಪೀಡಿತ 134 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 60 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 67 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.

LEAVE A REPLY

Please enter your comment!
Please enter your name here