Wednesday, June 29, 2022

Latest Posts

ಕಲಬುರಗಿ ನಗರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆ

ಹೊಸ ದಿಗಂತ ವರದಿ, ಕಲಬುರಗಿ:

ನಗರದ ಬಿಜೆಪಿ ಕಾರ್ಯಲಯದಲ್ಲಿ ಕಲಬುರ್ಗಿ ನಗರ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸಭೆಯನ್ನು ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ ಅವರು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಇಂದು ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿ , ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ನವರು ಹಿಂದುಳಿದ ವರ್ಗಗಳ ಅಭಿವೃದ್ಧಿ ಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಮತ್ತು ನೂತನವಾಗಿ ನಗರ ಜಿಲ್ಲಾ ಓಬಿಸಿ ಅಧ್ಯಕ್ಷರಾಗಿ ಅರವಿಂದ ಎಮ್ ಪೆÇೀದ್ದಾರ ಅವರು ಕೇವಲ ಒಂದು ವಾರದಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಕಾರ್ಯಕಾರಿ ಸಭೆ ಕರೆದಿರುವುದು ಅವರಲ್ಲಿ ಸಂಘಟನಾ ಶಕ್ತಿ ಇದೆ ಎಲ್ಲರೂ ಅವರನ್ನು ಬೆಂಬಲಿಸಿ ಸಂಘಟಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವಿವೇಕ ಡೇಬ್ಬಿ ಅವರು ಮಾತನಾಡುತ್ತಾ ಬಿಜೆಪಿ ಪಕ್ಷ ನಡೆದು ಬಂದ ದಾರಿ ಮತ್ತು ಓಬಿಸಿ ವರ್ಗಗಳ ಅಭಿವೃದ್ಧಿ ಗಾಗಿ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.
ರಾಜ್ಯ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸುರೇಶ ಬಾಬು ಅವರು ನಗರಜಿಲ್ಲಾ ಓಬಿಸಿ ಮೋರ್ಚಾ ಮತ್ತು ಉತ್ತರ, ದಕ್ಷಿಣ ದ ಪದಾಧಿಕಾರಿಗಳು ಮಾಹಿತಿ ಜೋತೆ ಗೆ ಮೋರ್ಚಾ ದ ಕಾರ್ಯಯೋಜನೆ, ಶಿಸ್ತುಬದ್ಧ ಸಮಯಪ್ರಜ್ಞೆ, ಸಂಘಟನಾ, ಬಗ್ಗೆ ಸಾಕಷ್ಟು ಚರ್ಚೆ ನಡೆಸಿ ಮಾಹಿತಿ ಪಡೆದರು.
ರಾಜ್ಯ ಓಬಿಸಿ ಉಪಾಧ್ಯಕ್ಷ ಶರಣಪ್ಪ ತಳವಾರ ಮಾತನಾಡಿ ಜನಸಂಘದಿಂದ ಹಿಡಿದು ಇಲ್ಲಿಯ ವರೇಗೆ ಪಕ್ಷದ ಸಿದ್ಧಾಂತ , ಯೋಜನೆ ಜಾರಿಗೆ ಬಂದಿದ್ದು ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಬಿಬಿಎಂಪಿ ಸದಸ್ಯರಾದ ಗೋವಿಂದ ರಾಜು ಮಾತನಾಡುತ್ತಾ ಶಕ್ತಿ ಶ್ರಮಿಸಿ ಇ ಭಾಗದಲ್ಲಿ ಓಬಿಸಿ ಶಕ್ತಿ ಮೀರಿ ಶ್ರಮಿಸಿ ಸಂಘಟನೆ ಮಾಡಬೇಕು ಬರೆ ಅಧ್ಯಕ್ಷರೆ ಒಬ್ಬರೆ ಮಾಡಿದರೆ ಆಯ್ತು ಅಂತ ಕೂಡ ಬಾರದು ಎಲ್ಲರೂ ತಮ್ಮ ತಮ್ಮ ಜವಾಬ್ದಾರಿ ಇಂದ ಕೆಲಸ ಮಾಡಿ ಈ ಭಾಗ ದಲ್ಲಿ ಓಬಿಸಿ ಸಂಘಟಿಸಬೇಕು ಎಂದು ಹೇಳಿದರು.
ನಗರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾದೇವ ಬೆಳಮಗಿ ಮಾತನಾಡುತ್ತಾ ಓಬಿಸಿ ಮೋರ್ಚಾದ ಸಂಘಟನೆ ಮಾಡಬೇಕು ಮತ್ತು ಅರವಿಂದ್ ಪೋದ್ದಾರ ಅವರು ಅಧ್ಯಕ್ಷರಾದ ಬಳಿಕ ಉತ್ತಮ/ ದಕ್ಷಿಣ ಎರಡೂ ಮಂಡಲ ಪದಾಧಿಕಾರಿಗಳು ಲಿಷ್ಟು ಮಾಡುವ ಸಲುವಾಗಿ ನನ್ನ ಜೋತೆ ಗೆ ನಿರಂತರ ಪ್ರಯತ್ನ ದಲ್ಲಿ ಇದ್ದಾರೆ ಅವರ ಬಲ್ಲಿ ಸಂಘಟನಾ ಶಕ್ತಿ ಇದೆ ಎಂದು ಹೆಳಿದರು.
ಅಧ್ಯಕ್ಷತೆ ವಹಿಸಿದ್ದ ನಗರ ಜಿಲ್ಲಾ ಓಬಿಸಿ ಮೋರ್ಚಾದ ಅಧ್ಯಕ್ಷ ಅರವಿಂದ ಎಮ್ ಪೋದ್ದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಓಬಿಸಿ ಮೋರ್ಚಾ ಸಂಘಟನೆ ಮಾಡಬೇಕು ಮತ್ತು ಓಬಿಸಿ ವರ್ಗಗಳ ಬರುವ ಎಲ್ಲಾ ಸಮುದಾಯದ ಮುಖಂಡರನ್ನು ಮತ್ತು ಯುವಕರನ್ನು ಬಿಜೆಪಿ ಪಕ್ಷದ ಕಡೆಗೆ ಬರುವಂತೆ ಮತ್ತು ಪಕ್ಷದ ವಿಚಾರ, ಯೋಜನೆ ಜಾರಿಗೆ ಬಂದಿದ್ದು ಹಿಂದುಳಿದ ವರ್ಗಗಳ ಜನರಿಗೆ ಓಬಿಸಿ ಮೋರ್ಚಾದ ವತಿಯಿಂದ ಸಭೆ ಕರೆಯಲಾಗುವುದು ಎಂದು ಹೇಳಿದರು ಮೋದಲಿಗೆ ಎಲ್ಲರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಮದನೆ ಪ್ರಧಾನ ಕಾರ್ಯದರ್ಶಿ, ರಮೇಶ್ ಗುತ್ತೇದಾರ್, ಶರಣು ಸುರ್ಯವಂಶಿ, ಅಭಿಷೇಕ್ ಹೆಚ್ಚ ,ಬಸು ಶಿಲವಂತ, ಪ್ರಶಾಂತ್ ನಿಂಬಾಳ್ಕರ್, ಕಿಶೋರ್ ಚವ್ಹಾಣ, ಸಂತೋಷ್ ಜಾಧವ್, ಮನೋಹರ ಗೌಳಿ,ಕ್ರಿಷ್ಣಾ ಪವಾರ್, ಉತ್ತರ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಬಿ ಕೊಂಡಂಪಳ್ಳಿಕರ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪಾಟೀಲ , ಕ್ರಿಷ್ಣಾ ಮಾಡ್ಯಾಳ, ರಾಕೇಶ ಇದ್ದರು. ಕಾರ್ಯಕ್ರಮ ದ ನಿರುಪಣೆಯನ್ನು ಶ್ರೀ ಕಲ್ಲಪ ಯಾದವ, ವಂದನಾರ್ಪಣೆ ಶ್ರೀ ಹಣಮಂತ ಪೂಜಾರಿ, ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss