ಹೊಸದಿಗಂತ ವರದಿ ಕಲಬುರಗಿ:
ಕಲಬುರಗಿ ಜಿಲ್ಲೆಯಲ್ಲಿ ಕೋವಿಡ ಲಸಿಕೆ ಡ್ರೈರನ್ ,ನ ಪ್ರಾಯೋಗಿಕ ಪರೀಕ್ಷೆ ಚಾಲನೆಯಾಗಿದ್ದು, ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಫಲಾನುಭವಿಗಳಿಗೆ ಹೂ ನೀಡುವ ಮೂಲಕ ಕಲಬುರಗಿ ಡಿಎಚ್ಒ ಸ್ವಾಗತಿಸಿದರು.
ಜಿಲ್ಲೆಯಲ್ಲಿ ಮೂರು ಕಡೆಗಳಲ್ಲಿ ಲಸಿಕೆ ಪ್ರಯೋಗ ನಡೆಯುತ್ತಿದ್ದು, ಪ್ರತಿ ಕೇಂದ್ರದಲ್ಲಿ 25 ಜನರಿಗೆ ಕೋವಿಡ ವ್ಯಾಕ್ಸಿನ ಲಸಿಕೆ ನೀಡುವ ಅಣುಕು ಪ್ರದಶ೯ನ ನಡೆಯುತ್ತಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಿಸಿ ಭೇಟಿ: ಕೋವಿಡ್ ಲಸಿಕೆ ಡ್ರೈ ರನ್ ಹಿನ್ನೆಲೆಯಲ್ಲಿ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರು ಶನಿವಾರ ಕಲಬುರಗಿ ನಗರದ ಅಶೋಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಲಸಿಕೆ ವಿತರಣೆಯ ವಿಧಾನದ ಪೂರ್ವಭ್ಯಾಸವನ್ನು ಪರಿಶೀಲಿಸಿದರು.