ಕಲಬುರಗಿ: ಜಿಲ್ಲೆ ಚಿಂಚೋಳಿ ತಾಲೂಕಿನ ನಾಗಿದಲಾಯಿ ಗ್ರಾಮದಲ್ಲಿ ಪ್ರವಾಹದಿಂದ ಗ್ರಾಮವೇ ಜಲಾವೃತವಾಗಿದ್ದು, ನಾಗ ದಲಾಯಿ ಗ್ರಾಮದ ಗರ್ಭಿಣಿ ಮಹಿಳೆ ಗೀತಾ ಎನ್ನುವವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.
ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ಗ್ರಾಮವೇ ಸಂಪೂರ್ಣ ಜಲಾವೃತ ಗೊಂಡಾಗ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಸುರಕ್ಷಿತ ದೃಷ್ಟಿಯಿಂದ ಗ್ರಾಮದ ಸರ್ಕಾರಿ ಶಾಲೆ ಕಟ್ಟಡದಲ್ಲಿ ರಕ್ಷಣೆ ಪಡೆದಿದ್ದರು.
ಈ ವೇಳೆ ಹೆರಿಗೆ ನೋವು ತೀವ್ರವಾಗಿದ್ದರಿಂದ ಶಾಲಾ ಕಟ್ಟದಲ್ಲೆ ಸಹಜ ಹೆರಿಗೆಗೆ ಸಂಬಂಧಿಕರು ಹಾಗೂ ಮಹಿಳೆಯ ಅಜ್ಜಿ ನಾಗಮ್ಮ ಕೈ ಜೋಡಿಸಿ ಸಹಜ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ನಂತರ ಮಹಿಳೆಯನ್ನ ಸಾಲೇಬಿರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ.ಈಗ ತಾಯಿ ಮಗು ಆರೋಗ್ಯವಾಗಿ ಇದ್ದಿದ್ದು, ನೆಂಟರೆಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.