Monday, July 4, 2022

Latest Posts

ಕಲಬುರಗಿ| ವಿಕಲಚೇತನರಿಗೆ ಶಾಸಕರಿಂದ ತಿಚಕ್ರ ವಾಹನಗಳ ವಿತರಣೆ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ 2011-12 ರಿಂದ 2014-15ನೇ ಸಾಲಿನ ವರೆಗಿನ ಎಸ್.ಎಫ್.ಸಿ., ಪಾಲಿಕೆ ನಿಧಿ ಹಾಗೂ ಉಳಿತಾಯ ಅನುದಾನದಡಿ ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಅರ್ಹ 46 ಜನ ವಿಕಲಚೇತನರಿಗೆ ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ ಅವರು ತ್ರಿಚಕ್ರ ವಾಹನಗಳನ್ನು ವಿತರಿಸಿದರು.

ಮಂಗಳವಾರ ಜೇವರ್ಗಿ ರಸ್ತೆಯ ಮುಕ್ತಾ ಟಾಕೀಸ್ ಬಳಿಯ ಶ್ರೀ ವೆಂಕಟೇಶ್ವರ ಅಟೋಮೋಟಿಸ್ ಶೋರಂ ಅಂಗಡಿಯಲ್ಲಿ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ, ಉಪ ಆಯುಕ್ತ (ಆಡಳಿತ) ಎಂ.ಡಿ. ಸಾದತ್ ಹುಸೇನ್, ಪರಿಸರ ಅಭಿಯಂತರ ಮುನಾಫ್ ಪಟೇಲ್, ಶೋರೂಂ ವ್ಯವಸ್ಥಾಪಕ ಹೃಷಿಕೇಶ ದೇಶಪಾಂಡೆ ಸೇರಿದಂತೆ ಮಹಾನಗರ ಪಾಲಿಕೆಯ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss