ಕಲಬುರಗಿ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹಾಗೂ ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಉಮೇಶ ಜಾಧವ ಅವರು 120 ದಿನಗಳಿಗೊಮ್ಮೆ ರಕ್ತದಾನ ಮಾಡಿದರೆ ರೋಗದಿಂದ ಬಳಲುತ್ತಿರುವ ಹಾಗೂ ರಕ್ತ ವಿಲ್ಲದೆ ಸಾವನಪ್ಪುವ ರೋಗಿಗಳಿಗೆ ಬದಕಿಸುವ ಕೆಲಸ ಮಾಡಿದಂತಾಗುತ್ತದೆ ಎಂದರು
ಜಿಲ್ಲೆಯ ಜನರು ರಕ್ತದಾನ ಮಾಡಿ ಬ್ಲಡ್ ಡೈರೆಕ್ಟರಿ ಇಟ್ಟುಕೋಳ್ಳಬೇಕು ಹಾಗೂ ಜಿಲ್ಲೆಯಲ್ಲಿ ರಕ್ತದ ಕೊರತೆಯಿಂದ ರೋಗಿ ಸಾಯಲು ಅವಕಾಶ ಮಾಡಿ ಕೊಡಬಾರದು ಎಂದರು.
ಈ ಸಂರ್ಭದಲ್ಲಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೆವೂರ್, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಸೇಡಂ ಮತಕ್ಷೇತ್ರದ ಶಾಸಕ ಬಸವರಾಜ ಪಾಟೀಲ ತೆಲ್ಕೂರ್, ಚಿಂಚೋಳಿ ಮತ ಕ್ಷೇತ್ರದ ಶಾಸಕ ಅವಿನಾಶ ಜಾಧವ್, ಜಿಮ್ಸ್ ವೈದ್ಯಕೀಯ ಕಾಲೇಜಿನ ಅಧಿಕಾರಿ ಹಾಗೂ ವೈದ್ಯರು ಉಪಸ್ಥಿತರಿದ್ದರು.