Wednesday, August 17, 2022

Latest Posts

ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾದ ಖದೀಮರು

ಹೊಸದಿಗಂತ ವರದಿ ಕಲಬುರಗಿ:

ನಗರದ ಹೃದಯ ಭಾಗ ಸರದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಎಸ್ ಬಿಐ ಟಿನ್ನಿ ಸೇವಾ ಕೇಂದ್ರದಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಅಲ್ಲಿದ್ದ ಸುಮಾರು ಒಂದು ಲಕ್ಷ ರೂ.‌‌ರಾಬರಿ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.
ಗುರುಲಿಂಗಪ್ಪ ಬಿರಾದಾರ (35) ಎಂಬುವರೇ ಹಲ್ಲೆಗೊಳಗಾದವರು. ಅವರನ್ನು ‌ಚಿಕಿತ್ಸೆಗಾಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಟೇಷನ್ ಬಜಾರ ಪ್ರದೇಶದ. ಪಟೇಲ್ ವೃತ್ತದ ಬಳಿಯ ಎಷಿಯನ್ ಪ್ಲಾಜಾದಲ್ಲಿ ಇರುವ ಎಸ್ ಬಿ ಐ ಬ್ಯಾಂಕಿನ ಪ್ರಾಂಚೈಸಿ ಪಡೆದುಕೊಂಡ ಗುರು ಲಿಂಗಪ್ಪ ವ್ಯವಹಾರ ನಡೆಸುತ್ತಿದ್ದರು.
ಎಸ್ಬಿಐ ಟಿನಿ ಹಣ ಜಮಾ ಮಾಡುವುದು ಇದೆ ಬಂದು ಅಪರಿಚತ ವ್ಯಕ್ತಿ ಬಂದು ಖಾತೆ ಸರಿಯಾಗಿ ನೀಡಿಲ್ಲ ಆಗ ಅಂಗಡಿಯವರು ಸರಿಯಾಗಿ ಹೇಳುವಂತೆ ಹೇಳಿದ್ದಾರೆ. ಆಗ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವಾಗ ಅಲ್ಲಿದ್ದ ವಸ್ತವಿನಿಂದ ತಲೆಗೆ ಹೊಡೆದು ಡ್ರಾದಲ್ಲಿ ಇದ್ದ ಹಣ ಲೂಟಿ ಮಾಡಿಕೊಂಡು ಪರಾರಿಯಾಗಿದ್ದಾನೆ.
ವ್ಯವಹಾರದಿಂದ ಸಂಗ್ರಹವಾಗಿದ್ದ ಒಂದು ಲಕ್ಷ ರೂ ದೋಚಲಾಗಿದೆ. ಸ್ಥಳಕ್ಕೆ ಇನ್ ಸ್ಪೆಕ್ಟರ್ ಸಿದ್ದರಾಮೇಶ ಗಡದ ಮತ್ತು ಸಿಬ್ಬಂದಿ ಭೇಟಿ ನೀಡಿದರು.
ಈ ಕುರಿತು ಸ್ಟೇಷನ್ ಬಜಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!