Saturday, August 13, 2022

Latest Posts

ಯಾದಗಿರಿ : ಜನವಸತಿಯಲ್ಲಿ ಕ್ವಾರೆಂಟೈನ ವಿರೋಧಿಸಿ ವಸತಿ ನಿಲಯಕ್ಕೆ ಮುಳ್ಳುಬೇಲಿ

ಯಾದಗಿರಿ : ನಗರದ ಹೈದ್ರಾಬಾದ ರಸ್ತೆಯಲ್ಲಿರುವ ವಸತಿ ನಿಲಯದಲ್ಲಿ ಕೂಲಿ ಕಾರ್ಮಿಕರನ್ನು ಕ್ವಾರೆಂಟೈನ ಮಾಡುವುದನ್ನು ವಿರೋಧಿಸಿ ಬಿಸಿಎಂ ವಸತಿ ನಿಲಯ ಬಾಗಿಲಿಗೆ ಹಾಗೂ ಅದರ ಮುಂದಿರುವ ರಸ್ತೆಗೆ ಮುಳ್ಳಿನಬೇಲಿ ಹಚ್ಚಿ ಮಾತಾ ಮಾಣಿಕೇಶ್ವರಿ ಬಡಾವಣೆಯ ಜನತೆ ಪ್ರತಿಭಟನೆ ನಡಿಸಿದ ಘಟನೆ ಜರಗಿದೆ.
ಜಿಲ್ಲೆಗೆ ಹೊರ ರಾಜ್ಯದಿಂದ ವಲಸಿಗರು ಆಗಮಿಸುತ್ತಿದ್ದು ಅವರನ್ನು ೧೪ ದಿನಗಳ ಕಾಲ ಕ್ವಾರೆಂಟೈನ್ ಮಾಡಲಾಗುತ್ತದೆ. ಅದಕ್ಕಾಗಿ ಇಲ್ಲಿರುವ ಬಿಸಿಎಂ ವಸತಿನಿಲಯವನ್ನು ಗುರುತಿಸಲಾಗಿತ್ತು. ಇದನ್ನು ತಿಳದ ಬಡಾವಣೆಯ ಜನರು ಮುಳ್ಳುಬೇಲಿಯನ್ನ ಅಳವಡಿಸಿ ಯಾವುದೇ ಕಾರಣಕ್ಕೂ ಇಲ್ಲಿ ಕ್ವಾರೆಂಟೈನ ಮಾಡಬಾರದು ಎಂದು ಜಿಲ್ಲಾಧಿಕಾರಿ ಮತ್ತು ನಗರಸಭೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.
ವಸತಿ ನಿಲಯದ ಸಿಬ್ಬಂಧಿಗಳು ಆಗಮಿಸಿ ವಸತಿನಿಲಯದ ಬಾಗಿಲಿಗೆ ಹಾಕಲಾಗಿದ್ದ ಮುಳ್ಳುಬೇಲಿಯನ್ನು ತೆರವು ಮಾಡಿದ್ದಾರೆ. ಕಳೆದ ಒಂದು ವಾರದಿಂದ ಅಧಿಕಾರಿಗಳು ಕ್ವಾರೆಂಟೈನ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡಿದ್ದಾರೆ. ಅಲ್ಲದೆ ಶುಕ್ರವಾರದಂದು ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಜಿಲ್ಲೆಯಲ್ಲಿ ಎರಡು ಪೊಸಿಟಿವೆ ಇದ್ದು, ಮಹರಾಷ್ಟçದಿಂದ ಬರುವ ಜನರಲ್ಲಿ ಸೋಂಕು ಇದೆ ಎಂಬ ಭೀತಿ ಜನರಲ್ಲಿ ಅತಂಕ ಹುಟ್ಟಿಸಿದೆ.
ಈ ಸುದ್ದಿ ಹರಡುತ್ತಿದ್ದಂತೆ ಬಡಾವಣೆಯ ಜನರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೂ ಜಿಲ್ಲಾಡಳಿತ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ಕಾದು ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss