ಹೊಸದಿಗಂತ ವರದಿ, ಕಲಬುರಗಿ:
2020ರ ಫೆಬ್ರವರಿ ಸಮ್ಮೇಳನ ಮುಗಿದು, ಹಾವೇರಿಯಲ್ಲಿ ಮತ್ತೊಂದು ಸಮ್ಮೇಳನಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಆದರೂ, ಕಲಬುರಗಿಯಲ್ಲಿ ನಡೆದ ಸಮ್ಮೇಳನದ ಲೆಕ್ಕ ಕೊಟ್ಟಿಲ್ಲ. ಹಣ ದುರ್ಬಳಕೆಯಾಗಿರೋ ಸಾಧ್ಯತೆ ಹಿನ್ನೆಲೆಯಲ್ಲಿ ಲೆಕ್ಕ ಕೊಡುವಲ್ಲಿ ವಿಳಂಬವಾಗುತ್ತಿದ್ದು, ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಗಳಿಗೆ ಪತ್ರ ಚಳವಳಿ ಮೂಲಕ ಹೆಚ್. ಶಿವರಾಮೇಗೌಡರ ರಕ್ಷಣಾ ವೇದಿಕೆ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್, ಸಮ್ಮೇಳನದ ಖರ್ಚಿನ ವಿವರ, ಸರಿಯಾದ ರೀತಿಯಲ್ಲಿ ಲೆಕ್ಕ ಇಟ್ಟಿದ್ದರೆ ಇಷ್ಟೊತ್ತಿಗಾಗಲೇ ಲೆಕ್ಕ ಕೊಡಬೇಕಾಗಿತ್ತು. ರಾಜ್ಯ ಸರ್ಕಾರದಿಂದ ಎಷ್ಷು ಹಣ ಬಂದಿದೆ, ರಾಜ್ಯ ಸರ್ಕಾರಿ ನೌಕರರು, ವಿವಿಧ ಸಂಘ ಸಂಸ್ಥೆಗಳು ಕೊಟ್ಟ ಹಣವೆಷ್ಟು, ಅದರಲ್ಲಿ ಖರ್ಚಾದ ಮೊತ್ತವೆಷ್ಟು ಎನ್ನೋದರ ಲೆಕ್ಕ ಕೊಡಲು ಅನಗತ್ಯ ವಿಂಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಸಮ್ಮೇಳನದ ಲೆಕ್ಕ ಕೇಳಿದರೆ ಕಸಾಪ ರಾಜ್ಯಾಧ್ಯಕ್ಷ ಮನು ಬಳಿಗಾರ ಜಿಲ್ಲಾಧಿಕಾರಿ ನೀಡಬೇಕು ಎಂದು ಹೇಳುತ್ತಾರೆ. ಜಿಲ್ಲಾಧ್ಯಕ್ಷ ವೀರಭದ್ರಪ್ಪ ಸಿಂಪಿ ಅವರು ನನಗೂ ಖರ್ಚು ವೆಚ್ಚಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ. ಸಮ್ಮೇಳನದಲ್ಲಿ ಭ್ರಷ್ಟಾಚಾರ ನಡೆದಿದೆ ಹಾಗಾಗಿ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳು ಮಧ್ಯ ಪ್ರವೇಶಿಸಿ ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಚಳವಳಿಯಲ್ಲಿ ಮುಖಂಡರಾದ ಚರಣರಾಜ ರಾಠೋಡ್, ರವಿ ವಾಲಿ, ಪ್ರಮೋದ್, ಅಸ್ಲಂ ಖುರೇಷಿ, ಕವೀನ್ ನಾಟೀಕಾರ, ಮಲ್ಲಿಕಾರ್ಜುನ ನಾಯಿಕೋಡಿ ಸೇರಿದಂತೆ ಇನ್ನಿತರರಿದ್ದರು.