ಹೊಸದಿಗಂತ ವರದಿ,ಕಲಬುರಗಿ:
ಪ್ರತಿಯೊಂದು ಪುಸ್ತಕಗಳು ಪ್ರತಿ ಮನುಷ್ಯನ ಒಳ್ಳೆಯ ಹಾಗೂ ಆಪ್ತ ಸ್ನೇಹಿತನಿದ್ದಂತೆ ಎಂದು ಅಫಜಲಪುರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅವರು ಭಾನುವಾರ ನಗರದ ಚೆಂಬರ್ ಆಫ್ ಕಾಮಸ೯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಸಿದ್ದಲಿಂಗೇಶ್ವ ಬುಕ್ ಡಿಪೋ ಮತ್ತು ಪ್ರಕಾಶನ ಹಾಗೂ ಶ್ರೀ ಬಸವ ಪ್ರಕಾಶನ ಕಲಬುರಗಿ ಸಂಯುಕ್ತಾಶ್ರಯದಲ್ಲಿ 44ನೇ ವಾಷಿ೯ಕೋತ್ಸವ ಹಾಗೂ 105 ಪುಸ್ತಕಗಳ ಲೋಕಾಪ೯ಣೆ ಕಾಯ೯ಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶಿವ೯ಚನ ನೀಡಿದರು.
ನಾವು ನಮ್ಮ ಜೀವನದಲ್ಲಿ ಒಂದೋ ಅಥವಾ ಎರಡು ಪುಸ್ತಕಗಳ ಲೋಕಾಪ೯ಣೆಯನ್ನು ನೋಡಿದ್ದೇವೆ, ಆದರೆ ಇಲ್ಲಿ 105 ಪುಸ್ತಕಗಳ ಲೋಕಾಪ೯ಣೆ ಗೊಳ್ಳುತ್ತಿರುವುದು ವಿಶೇಷವಾದ ಕಾಯ೯ಕ್ರಮವೆಂದರು.
ಮನುಷ್ಯನ ಮನಸ್ಸನ್ನು ಸಂಗ್ರಹ ಮಾಡುವ ಸಾಮಥ್ಯ೯ ಪುಸ್ತಕಕ್ಕೆ ಮಾತ್ರವಿದೆ. ಮನುಷ್ಯನ ಬಟ್ಟೆ ಹರಿದರು ಚಿಂತೆ ಇಲ್ಲ, ಆದರೆ ಕೈಯಲ್ಲಿ ಒಂದು ಪುಸ್ತಕ ಇರುವುದರಿಂದ ತನ್ನ ಮನಸ್ಸಿನ ಶಾಂತಿಯನ್ನು ಕಂಡುಕೊಳ್ಳಬಲ್ಲನು ಎಂದರು.
ಪ್ರತಿಯೊಂದು ಶಾಸ್ತ್ರವು ಮನುಷ್ಯನಿಗೆ ಮಾತ್ರ ಬರೆದಿದೆ. ಯಾಕಂದರೆ ಪಶು,ಪಕ್ಷಿಗಳು ತಮ್ಮ ನೈತಿಕತೆಯನ್ನು ಕಳೆದುಕೊಂಡಿಲ್ಲ, ಬದಲಾಗಿ ಮನುಷ್ಯ ತನ್ನ ಎಲ್ಲ ನೈತಿಕತೆ ಕಳೆದುಕೊಂಡ ಹಿನ್ನೆಲೆಯಲ್ಲಿ ಪುಸ್ತಕಗಳು ಮನುಷ್ಯನಿಗೆ ಮಾತ್ರ ಇವೆ ಎಂದರು.
ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ದಯಾನಂದ ಮಾತನಾಡಿದರು. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ ಮಾತನಾಡಿದರು.
ಈ ಸಂದರ್ಭದಲ್ಲಿ ರಹಮತ್ ತರಿಕೆರೆ, ಎಂ.ವಿ.ಅಳಗವಾಡಿ ಇದ್ದರು. ಕನ್ನಡ ವಿಭಾಗದಿಂದ 11 ಚಿನ್ನದ ಪದಕಗಳನ್ನು ಪಡೆದ ಕುಮಾರಿ ಜಯಶ್ರೀ ಪಾಟೀಲ್ ಅವರಿಗೆ ಸನ್ಮಾನಿಸಲಾಯಿತು.