Monday, July 4, 2022

Latest Posts

ಕಲಬುರಗಿ| 14 ವರ್ಷದ ಬಾಲಕನಿಗೆ ಸೋಂಕು: ದಾಖಲಾದ ಮತ್ತೊಂದು ಪ್ರಕರಣ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 14 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪಿ.529 ಮಹಿಳೆಯ ಸಂಪರ್ಕದಿಂದ ಸೋಂಕು ತಗುಲಿದೆ.

ಸೋಂಕಿತ ಮಹಿಳೆ ಮೋಮಿನ್‌ಪುರದ ನಿವಾಸಿಯಾಗಿದ್ದು, ಈಕೆಗೆ ಇತ್ತೀಚೆಗೆ ಕೊರೋನಾ ಗೆ ಬಲಿಯಾದ 57 ವರ್ಷದ ಬಟ್ಟೆ ವ್ಯಾಪಾರಿ (ಪಿ.205)ಯ ಸಂಪರ್ಕದಿಂದ ಸೋಂಕು ತಗುಲಿತ್ತು. ಇದೀಗ ಮಹಿಳೆಯ ಸಂಪರ್ಕದಿಂದ ಬಾಲಕನಿಗೆ ಸೋಂಕು ತಗುಲಿದೆ.ಮೃತಪಟ್ಟ ಬಟ್ಟೆ ವ್ಯಾಪಾರಿಯಿಂದ ಇದುವರೆಗೆ ಒಟ್ಟು 30 ಜನರಿಗೆ ಸೋಂಕು ತಗುಲಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss