Sunday, June 26, 2022

Latest Posts

ಕಲಬುರಗಿ| 205 ಗ್ರಾ.ಪಂ.ಗಳ 1191 ಕ್ಷೇತ್ರಗಳಿಗೆ 3422 ಸದಸ್ಯರು ಆಯ್ಕೆ

ಹೊಸ ದಿಗಂತ ವರದಿ, ಕಲಬುರಗಿ:

ಕಲಬುರಗಿ ಜಿಲ್ಲೆಯ 11 ತಾಲೂಕಿನ 261 ಗ್ರಾ.ಪಂ.ಗಳ ಪೈಕಿ 242 ಗ್ರಾಮ ಪಂಚಾಯಿತಿಗಳ 1,427 ಕ್ಷೇತ್ರಗಳಿಗೆ ಎರಡು ಹಂತಗಳಲ್ಲಿ ಕಳೆದ ಡಿ.22 ಹಾಗೂ ಡಿ. 27 ರಂದು ಚುನಾವಣೆ ಜರುಗಿದ್ದು. ಬುಧವಾರ ಮತ ಎಣಿಕೆ ಪ್ರಕ್ರಿಯೆ ನಡೆದಿದ್ದು, ರಾತ್ರಿ 11.30 ಗಂಟೆಯವರೆಗೆ 1191 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ.
242 ಗ್ರಾ.ಪಂ.ಗಳ 1427 ಕ್ಷೇತ್ರಗಳ ಪೈಕಿ 205 ಗ್ರಾ.ಪಂ.ಗಳ 1191 ಕ್ಷೇತ್ರಗಳಿಗೆ 3422 ಸದಸ್ಯರು ಆಯ್ಕೆಗೊಂಡಿದ್ದಾರೆ.
ಅಪಜಲಪೂರ, ಶಹಾಬಾದ, ಕಾಳಗಿ ಹಾಗೂ ಚಿತ್ತಾಪೂರ ತಾಲೂಕಿನ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದ ತಾಲೂಕುಗಳು ಕೆಲವು ಕ್ಷೇತ್ರಗಳ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ.
ಕಲಬುರಗಿ ತಾಲೂಕಿನ 28 ಗ್ರಾ.ಪಂ. 166 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 16 ಗ್ರಾಮ ಪಂಚಾಯತಿಗಳ 87 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 242 ಸದಸ್ಯರು ಆಯ್ಕೆಗೊಂಡಿದ್ದಾರೆ.
ಆಳಂದ ತಾಲೂಕಿನ 36 ಗ್ರಾ.ಪಂ. 202 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 32 ಗ್ರಾಮ ಪಂಚಾಯತಿಗಳ 180 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 528 ಸದಸ್ಯರು ಆಯ್ಕೆಗೊಂಡಿದ್ದಾರೆ.
ಅಫಜಲಪೂರ ತಾಲೂಕಿನ 28 ಗ್ರಾ.ಪಂ. 177 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 28 ಗ್ರಾಮ ಪಂಚಾಯತಿಗಳ 177 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 498 ಸದಸ್ಯರು ಆಯ್ಕೆಗೊಂಡಿದ್ದಾರೆ.
ಜೇವರ್ಗಿ ತಾಲೂಕಿನ 23 ಗ್ರಾ.ಪಂ. 123 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 21 ಗ್ರಾಮ ಪಂಚಾಯತಿಗಳ 109 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 329 ಸದಸ್ಯರು ಆಯ್ಕೆಗೊಂಡಿದ್ದಾರೆ.
ಚಿತ್ತಾಪುರ ತಾಲೂಕಿನ 24 ಗ್ರಾ.ಪಂ. 133 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 24 ಗ್ರಾಮ ಪಂಚಾಯತಿಗಳ 133 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 410 ಸದಸ್ಯರು ಆಯ್ಕೆಗೊಂಡಿದ್ದಾರೆ.
ಸೇಡಂ ತಾಲೂಕಿನ 27 ಗ್ರಾ.ಪಂ. 159 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 12 ಗ್ರಾಮ ಪಂಚಾಯತಿಗಳ 66 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 174 ಸದಸ್ಯರು ಆಯ್ಕೆಗೊಂಡಿದ್ದಾರೆ.
ಚಿಂಚೋಳಿ ತಾಲೂಕಿನ 27 ಗ್ರಾ.ಪಂ. 163 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 26 ಗ್ರಾಮ ಪಂಚಾಯತಿಗಳ 156 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 441 ಸದಸ್ಯರು ಆಯ್ಕೆಗೊಂಡಿದ್ದಾರೆ.
ಕಮಲಾಪುರ ತಾಲೂಕಿನ 16 ಗ್ರಾ.ಪಂ. 99 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 15 ಗ್ರಾಮ ಪಂಚಾಯತಿಗಳ 93 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 251 ಸದಸ್ಯರು ಆಯ್ಕೆಗೊಂಡಿದ್ದಾರೆ.
ಕಾಳಗಿ ತಾಲೂಕಿನ 14 ಗ್ರಾ.ಪಂ. 85 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 14 ಗ್ರಾಮ ಪಂಚಾಯತಿಗಳ 85 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 239 ಸದಸ್ಯರು ಆಯ್ಕೆಗೊಂಡಿದ್ದಾರೆ.
ಶಹಾಬಾದ ತಾಲೂಕಿನ 4 ಗ್ರಾ.ಪಂ. 31 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 4 ಗ್ರಾಮ ಪಂಚಾಯತಿಗಳ 31 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 90 ಸದಸ್ಯರು ಆಯ್ಕೆಗೊಂಡಿದ್ದಾರೆ.
ಯಡ್ರಾಮಿ ತಾಲೂಕಿನ 15 ಗ್ರಾ.ಪಂ. 89 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 13 ಗ್ರಾಮ ಪಂಚಾಯತಿಗಳ 74 ಕ್ಷೇತ್ರಗಳ ಎಣಿಕೆ ಮುಕ್ತಾಯವಾಗಿ 220 ಸದಸ್ಯರು ಆಯ್ಕೆಗೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss