ಕಲಬುರ್ಗಿ: ಕೊರೋನಾ ಸೋಂಕಿನಿಂದ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 10 ಜನ ನಿಧನವಾಗಿರುವ ಬಗ್ಗೆ ಬುಧವಾರ ವರದಿಯಾಗಿದ್ದ್ದು, ಇದರಿಂದ ಕೊರೋನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 82ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮೋಮಿನಪುರ ಪ್ರದೇಶದ 45 ವರ್ಷದ ಪುರುಷ (P-58193) ಜು.20 ರಂದು ಆಸ್ಪತ್ರೆಗೆ ದಾಖಲಾಗಿ ಜು.28 ರಂದು ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿಯ ಸಂಜೀವ ನಗರದ 58 ವರ್ಷದ ಪುರುಷ (P-64634) ಜು.19 ರಂದು ಆಸ್ಪತ್ರೆಗೆ ದಾಖಲಾಗಿ ಜು.21 ರಂದು ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಿಂದ ಸೇಡಂ ಪಟ್ಟಣದ 58 ವರ್ಷದ ಪುರುಷ (P-69099) ಜು.13 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಜು.18 ರಂದು ಅಲ್ಲಿಯೆ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಅನೇಮಿಯಾ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಸ್ಟೇಷನ್ ಬಜಾರ್ ಪ್ರದೇಶದ 35 ವರ್ಷದ ಮಹಿಳೆ (P-76764) ಜು.17 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ 56 ವರ್ಷದ ಪುರುಷ (P-94476) ಜು.21 ರಂದು ಆಸ್ಪತ್ರೆಗೆ ದಾಖಲಾಗಿ ಜು.25 ರಂದು ನಿಧನ ಹೊಂದಿದ್ದಾರೆ.
ಐ.ಎಲ್.ಐ. ಹಿನ್ನೆಲೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಹೀರಾಪುರ ಪ್ರದೇಶದ 78 ವರ್ಷದ ವೃದ್ಧ (P-94812) ಜು.20 ರಂದು ಸ್ವಗೃಹದಲ್ಲಿಯೆ ನಿಧನ ಹೊಂದಿರುತ್ತಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆ ಜೊತೆಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಸುಂದರ ನಗರದ 62 ವರ್ಷದ ವೃದ್ಧ (P-103231) ಜು.24 ರಂದು ಆಸ್ಪತ್ರೆಗೆ ದಾಖಲಾಗಿ ಜು.26 ರಂದು ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಕಲಬುರಗಿ ನಗರದ ಆಳಂದ ಚೌಕ್ ಪ್ರದೇಶದ 52 ವರ್ಷದ ಪುರುಷ (P-104882) ಜು.25 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ಐ.ಎಲ್.ಐ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿಯ ಸಿದ್ದೇಶ್ವರ ಕಾಲೋನಿಯ 55 ವರ್ಷದ ಪುರುಷ (P-105011) ಜು.24 ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನ ಹೊಂದಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯೊಂದಿಗೆ ಕಲಬುರಗಿಯ ಶೇಖ್ ರೋಜಾ ಪ್ರದೇಶದ 63 ವರ್ಷದ ವೃದ್ಧ (P-85651) ಜು.23 ರಂದು ಆಸ್ಪತ್ರೆಗೆ ದಾಖಲಾಗಿ ಜು.25 ರಂದು ನಿಧನ ಹೊಂದಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದರು.