Wednesday, July 6, 2022

Latest Posts

ಕಲಾಕೃತಿ ಹೊಂದಿದ್ದ ಆನೆ ದಂತಗಳ ಮಾರಾಟಕ್ಕೆ ಯತ್ನ: ಮೂವರ ಬಂಧನ

ಹೊಸದಿಗಂತ ವರದಿ, ಕೊಡಗು:

ಕಲಾಕೃತಿಗಳ ಕೆತ್ತನೆ ಹೊಂದಿರುವ ಮೂರು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ, ಕೊಡಗಿನ ಇಬ್ಬರ ಸಹಿತ ಮೂವರನ್ನು ಬಂಧಿಸಿದ್ದಾರೆ.

ಸೋಮವಾರಪೇಟೆ ಪಟ್ಟಣದ ಆಲೆಕಟ್ಟೆ ರಸ್ತೆ ನಿವಾಸಿ ಮುರಳಿ ಅಲಿಯಾಸ್ ಶಿವದಾಸ್ (55) ಹಾಗೂ ವೆಂಕಟೇಶ್ವರ ಬ್ಲಾಕ್‌ನ ಸುಮಂತ್ (26) ಹಾಗೂ ಮೈಸೂರು ನಾಯ್ಡು ನಗರದ ಮನೋಹರ್ (40) ಎಂಬವರು ಬಂಧಿತ ಆರೋಪಿಗಳು.

ವೈವಿಧ್ಯ ಕೆತ್ತನೆಗಳನ್ನು ಹೊಂದಿದ್ದ ಮೂರು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ದೊರೆತ ಖಚಿತ ಸುಳಿವಿನ ಮೇರೆ ಮೈಸೂರು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಮೈಸೂರಿನ ನಾಯ್ಡು ನಗರದ ಬಳಿ ಆರೋಪಿಗಳನ್ನು ತಡೆದು ಪರಿಶೀಲಿಸಿದ ಸಂದರ್ಭ ಆಲ್ಟೋ ಕಾರಿನಲ್ಲಿ (ಕೆ.ಎ02-ಎಂಬಿ 0577) ಕೆತ್ತನೆ ಮಾಡಿರುವ ಮೂರು ಆನೆ ದಂತಗಳು ಪತ್ತೆಯಾಗಿವೆ.

ಈ ಸಂದರ್ಭ ಕಾರಿನ ಸಹಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಕೃತ್ಯಕ್ಕೆ ಬಳಸಲಾಗಿದ್ದ ದ್ವಿಚಕ್ರ ವಾಹನ (ಕೆ.ಎ.12 ಹೆಚ್.8233)ವನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಅರಣ್ಯ ಸಂಚಾರಿ ದಳದ ಡಿಸಿಎಫ್ ಎ.ಟಿ. ಪೂವಯ್ಯ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಲ್ಲಿ ಆರ್‌ಎಫ್‌ಓ ವಿವೇಕ್, ಡಿ.ಆರ್.ಎಫ್.ಓ. ಸುಂದರ್, ಪ್ರಮೋದ್, ಲಕ್ಷ್ಮೀಶ್, ಸ್ನೇಹಾ, ಮೇಘನಾ, ನಾಗರಾಜ್, ಸಿಬ್ಬಂದಿಗಳಾದ ಚೆನ್ನಬಸಪ್ಪ, ಮಹಾಂತೇಶ್, ಶರಣಪ್ಪ, ಗೋವಿಂದು, ವಿರೂಪಾಕ್ಷ, ರವಿಕುಮಾರ್, ರವಿನಂದನ್, ಚಾಲಕರಾದ ಪುಟ್ಟಸ್ವಾಮಿ ಮತ್ತು ಮಧು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss