ಹೊಸದಿಗಂತ ಆನ್ಲೈನ್ ಡೆಸ್ಕ್:
ರಾಜ್ಯದಲ್ಲಿ ಸೂಪರ್ ಸ್ಪೀಡ್ ಕೊರೋನಾ ಭೀತಿ ಹೆಚ್ಚುತ್ತಿದ್ದು, ಕೊರೋನಾ ಎಫೆಕ್ಟ್ ಕಲಾಭಿಮಾನಿಗಳಿಗೂ ತಟ್ಟಿದೆ.
ಪ್ರತಿಬಾರಿಯಂತೆ ಈ ಬಾರಿಯೂ ಚಿತ್ರಸಂತೆ ನಡೆಯುತ್ತಿದೆ. ಆದರೆ ಈ ಬಾರಿ ಆನ್ಲೈನ್ನಲ್ಲಿ ಚಿತ್ರಸಂತೆಯನ್ನು ವೀಕ್ಷಿಸಬೇಕಿದೆ.
ಒಂದು ತಿಂಗಳ ಕಾಲ ನಡೆಯುವ ಚಿತ್ರಸಂತೆಗೆ ಇನ್ಪೋಸಿಸ್ ಫೌಂಡೇಶನ್ನ ಸುಧಾಮೂರ್ತಿ ಅವರು ಚಾಲನೆ ನೀಡಲಿದ್ದಾರೆ. ಜ.3ರಿಂದ ಚಿತ್ರಸಂತೆ ಆರಂಭವಾಗಲಿದ್ದು, ಕೊರೋನಾ ವಾರಿಯರ್ಸ್ಗೆ ಚಿತ್ರಸಂತೆ ಅರ್ಪಣೆ ಮಾಡಲಾಗಿದೆ. 1500 ಜನ ಕಲಾವಿದರು ಪಾಲ್ಗೊಳ್ಳಲಿದ್ದು, Chitra Santhe.Org ಈ ಲಿಂಕ್ ಮೂಲಕ ವೀಕ್ಷಿಸಬಹುದಾಗಿದೆ. ಜೊತೆಗೆ ಮಾರಾಟ ಕೂಡ ಆನ್ಲೈನ್ನಲ್ಲಿಯೇ ನಡೆಯಲಿದೆ.