Wednesday, July 6, 2022

Latest Posts

ಕಲಾವಿದರಾದ ಡಾ.ಎಸ್.ಎಮ್. ಪಂಡಿತ್ ರ ಭವ್ಯ ಮೂರ್ತಿ ನಿರ್ಮಾಣಕಾರರಿಗೆ ಸನ್ಮಾನ

ಹೊಸ ದಿಗಂತ ವರದಿ, ಕಲಬುರಗಿ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಮತ್ತು ರಂಗಾಯಣ, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಿಮೆಂಟ್ ಮತ್ತು ಫೈಬರ್ ಶಿಲ್ಪ ಶಿಬಿರದಲ್ಲಿ ನಗರದ ವಿಶ್ವವಿಖ್ಯಾತ , ಕಲಾವಿದರಾದ ಡಾ. ಎಸ್. ಎಮ್. ಪಂಡಿತ್ ರ ಭವ್ಯ ಮೂರ್ತಿ ನಿರ್ಮಾಣಕಾರರಾದ ಆರ್. ವೇಣುಗೋಪಾಲ್ ಬೆಂಗಳೂರು, ಮತ್ತು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಅಧ್ಯಕ್ಷರಾದ ವೀರಣ್ಣ ಮಾ. ಅರ್ಕಸಾಲಿ ಅವರನ್ನು ನಗರ ಜಿಲ್ಲೆಯ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಅರವಿಂದ್ ಎಮ್.  ಬೆಣ್ಣಿಶಿರೂರ ಅವರು ಸನ್ಮಾನಿಸಿ ಗೌರವಿಸಿದರು.
ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ವಿಠ್ಠಲರಾವ ಸುತಾರ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ಸಂಚಾಲಕ ನಟರಾಜ ಎಂ ಶಿಲ್ಪಿ, ಪ್ರಭಾಕರ ಟೆಂಗಳಿ, ನಾಗರಾಜ್ ಆಲಗೂಡ, ಅಭಿಷೇಕ್ , ಹಿರಿಯ ಶಿಲ್ಪ ಕಲಾವಿದ ಹಣಮಂತ ಬಿ.ಗಡ್ಡಿ ಗದಗ, ಗಣೇಶ ಎಂ.ತೋರಗಲ್, ಕೋಪ್ಪಳ, ಸೋಮಶೇಖರ ಈರಪ್ಪ, ಧಾರವಾಡ, ಡಿ.ಟಿ.ರಮೇಶ, ಚಿತ್ರದುರ್ಗ ಹರೀಶಕುಮಾರ್ ಆರ್, ದಾವಣಗೆರೆ ರಾಜಕುಮಾರ್ ಸಿ.ಮಾಲಗತ್ತಿ, ಕಲಬುರ್ಗಿ ಸುಮನ ಬಿ, ಮೈಸೂರು ಸಂತೋಷ್ ಅಪ್ಪೆ, ಬೀದರ್, ಸಹಾಯಕ ಶಿಲ್ಪ ಕಲಾವಿದರಾದ ಗಣೇಶ ಕಲಬುರ್ಗಿ, ನಾಗೇಶ ವೈ ಮಾದರ, ವಿಜಾಪುರ ಜಯಸೂರ್ಯ ಎಂ, ರಾವ್, ಶಿವಮೊಗ್ಗ ಪ್ರಸನ್ನ, ಕಲಬುರ್ಗಿ ಆನಂದ್ ಎಸ್, ಮೈಸೂರ್ ಪ್ರಭಾಕರ್ ಕೆ.ವಿಶ್ವಕರ್ಮ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss