Thursday, August 11, 2022

Latest Posts

ಕಲಿಸಿದ ಗುರುಗಳ ಮಾತಿಗೆ ಮನ್ನಣೆ‌ ನೀಡಿ, ಇತರರಿಗೆ ಮಾದರಿಯಾದ ಸಚಿವ ಆನಂದ್‌ ಸಿಂಗ್

ಬಳ್ಳಾರಿ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎನ್ನುವ ಹಾಗೆ, ಕಲಿಸಿದ ಗುರುಗಳ ಮಾತಿಗೆ ಮನ್ನಣೆ‌ ನೀಡಿದ ಅರಣ್ಯ ಖಾತೆ ಹಾಗೂ ಜಿಲ್ಲಾ‌ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಇತರರಿಗೆ ಮಾದರಿಯಾಗಿದ್ದಾರೆ.
ಗುರುಗಳು ಹೇಳಿದ್ದು, ಒಂದಲ್ಲ, ಎರಡಲ್ಲ ಬರೋಬ್ಬರಿ 6 ಲಕ್ಷ ರೂ.ಗಳನ್ನು ಗುರುವಿಗೆ ಕಾಣಿಕೆಯಾಗಿ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ. ನಿವೃತ್ತಿ ಜೀವನದ ಬಳಿಕ ಗುರುಗಳಿಗೆ ಶಿಷ್ಯರೇ ನೆರವಾಗಲಿದ್ದಾರೆ ಎನ್ನುವ ಮಾತಿಗೆ ಸಚಿವರು ಉದಾಹರಣೆಗೆಯಾಗಿ ಇತರರಿಗೆ ಮಾದರಿಯಾಗಿದ್ದಾರೆ. ಗುರು ಕಾಣಿಕೆ ಸಲ್ಲಿಸಿದ ಸಚಿವ ಆನಂದ್​ ಸಿಂಗ್ ಅವರು, ಬಾಲ್ಯದಲ್ಲಿ ಶಿಕ್ಷಣ ಕಲಿಸಿದ ಗುರುಗಳನ್ನು ‌ಮರೆತಿಲ್ಲ. ನಗರದ ಬಳ್ಳಾರಿ ಮೇರಿ ಮಾತಾ ಪ್ರೇಮಾಶ್ರಮದಲ್ಲಿ ನೆಲೆಸಿರುವ ವಯೋವೃದ್ಧೆ ಫಾತಿಮಾ ಶಿಕ್ಷಕಿಯನ್ನು ಭೇಟಿಯಾಗಿ ಅವರ ಕುಶಲೋಪರಿ ವಿಚಾರಿಸಿದರು. ಈ ವೇಳೆ ಟೀಚರ್ ನಿಮಗೇನಾದ್ರೂ ನನ್ನಿಂದ ಸಹಾಯಹಸ್ತ ಬೇಕಾಗಿದ್ರೆ‌ ಸಂಕೋಚವಿಲ್ಲದೇ ಹೇಳಿ ಎಂದು ಸಚಿವರು ಮನವಿ ಮಾಡಿದರು. ವಯೋವೃದ್ಧೆ ಶಿಕ್ಷಕಿ ಫಾತಿಮಾ ಅವರು, ನನಗಾಗಿ ಏನನ್ನೂ ಬೇಡ, ವಿಧವೆಯಾಗಿರುವ ನನ್ನ ಹಳೆ ವಿದ್ಯಾರ್ಥಿನಿ ರಜಿನಿಗೆ ಸಹಾಯಹಸ್ತ ನೀಡಿ, ಅವರು ಕಷ್ಟದಲ್ಲಿದ್ದಾರೆ ಎಂದು ಮನವಿ ಮಾಡಿ ಶಿಕ್ಷಕಿ ಔದಾರ್ಯ ಮೆರೆದರು.‌ ನನ್ನ ಕೈಯಲ್ಲೇ ಕಲಿತ ರಜಿನಿ ಎನ್ನುವವರು ತೀರಾ ಕಷ್ಟದಲ್ಲಿದ್ದಾರೆ ಎಂದು ಆಲೋಚಿಸುತ್ತಾ ಸಚಿವರೆದರು‌ ಕೆಲ ಕಾಲ ಮೌನಕ್ಕೆ ಶರಣಾದರು. ಕೂಡಲೇ ಕಲಿಸಿದ ಗುರುಗಳ ಮಾತಿಗೆ ಮನ್ನಣೆ‌ ನೀಡಿದ ಸಚಿವರು 6 ಲಕ್ಷ ರೂ.ಗಳನ್ನು ನೀಡಿದರು. ಈ ವೇಳೆ ಶಿಕ್ಷಕಿ ಮೊಗದಲ್ಲಿ ಮಂದಹಾಸ, ಸಂತಸ, ಸಂಭ್ರಮ ಮನೆ ಮಾಡಿತು. ಸಚಿವರ ಈ ಸಹಾಯ ಹಸ್ತಕ್ಕೆ ಅಭಿನಂದನೆಗಳನ್ನು ಸಲ್ಲಿಸುವೆ ಎಂದು ಶಿಕ್ಷಕಿ ಪಾತಿಮಾ ಹೇಳಿದರು.
ಮಾದರಿ ಶಿಷ್ಯ: ಶಿಕ್ಷಕಿ ಫಾತಿಮಾ ಮಾತನಾಡಿ, ನನ್ನ‌ ಕೈಯಲ್ಲಿ ಕಲಿತ ವಿದ್ಯಾರ್ಥಿ ಆನಂದ್‌ ಸಿಂಗ್ ಸದ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಬಡವರು, ರೈತರು, ಮಹಿಳೆಯರು, ಕಾರ್ಮಿಕರು ಯಾರೇ ಇರಲಿ‌ ಕಷ್ಟದಲ್ಲಿರುವ ಯಾರೇ ಅವರ ಬಳಿ ತೆರಳಿದರೂ ಸಹಯ ಮಾಡುವ ಸ್ವಭಾವ ಅವರದ್ದಾಗಿದೆ. ಇದು ನನಗೆ ಸಂತಸ‌ ಮೂಡಿಸಿದೆ. ಸಚಿವರು ನಮ್ಮ ಪ್ರೇಮಾಶ್ರಮಕ್ಕೆ ಆಗಮಿಸಿದ್ದರು. ಆಗ ನನ್ನ ಕೈಯಲ್ಲಿ ಕಲಿತ ಶಿಷ್ಯೆಯ ಕಷ್ಟಗಳನ್ನು ಅವರ ಎದುರು‌ ಪ್ರಸ್ತಾಪಿಸಿ, ಮನೆ ಕಟ್ಟಿಸಿಕೊಳ್ಳಲು‌ ಆರ್ಥಿಕವಾಗಿ ಅವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದೆ. ಈ ವೇಳೆ ಏನನ್ನೂ ಆಲೋಚಿಸದೇ ಆರು‌ ಲಕ್ಷ ರೂ.ಗಳನ್ನು ಗುರುವಿನ‌ ಕಾಣಿಕೆಯಾಗಿ ನೀಡಿದ್ದಾನೆ, ಇದು ನನಗೆ ಹೆಮ್ಮ‌ ತರಿಸಿದೆ. ನಾನು ಹೊಸಪೇಟೆ ತಾಲೂಕಿನ‌ ಕಲ್ಲಹಳ್ಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವಾಗ ಸಚಿವ ಆನಂದ್ ಸಿಂಗ್ ನನ್ನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ನಾನು ಕೇಳಿದ ಸಹಾಯಕ್ಕೆ ಮನ್ನಣೆ‌ ನೀಡಿದ‌ ಅವರು, ನನ್ನ ಶಿಷ್ಯೆಯಾದ ರಜಿನಿಗೆ ಕೂಡಲೇ ಹಣಕಾಸಿನ ನೆರವು ನೀಡಿರುವುದು ಸಂತಸ‌ ಮೂಡಿಸಿದೆ ಎಂದರು. ನನ್ನ ಕೈಯಲ್ಲೇ ಕಲಿತ ಈ ಹುಡುಗನಿಗೆ ಸಹಾಯಹಸ್ತ ನೀಡೋ ಮನೋಭಾವ ಇದೆಯಲ್ಲ ಅಷ್ಟೇ ಸಾಕು.‌. ನನಗೆ ಈ ಜನ್ಮ ಪಾವನವಾಯಿತು ಎಂದರು.
ನೆರವು ಪಡೆದ ರಜಿನಿ ಅವರು ಮಾತನಾಡಿ, ನಾನೂ ಕೂಡ ಫಾತಿಮಾ ಸಿಸ್ಟರ್ ಅವರ ವಿದ್ಯಾರ್ಥಿನಿ. ನನಗೆ ಮದುವೆಯಾಗಿ ಮೂರು ಮಕ್ಕಳಿವೆ. ನನ್ನ ಪತಿ ಅನಾರೋಗ್ಯ ಹಿನ್ನೆಲೆ ಮೃತಪಟ್ಟರು. ಅಂದಿನಿಂದಲೂ ಈ ಪ್ರೇಮಾಶ್ರಮವೇ ನನಗೆ ಆಸರೆಯಾಯಾಗಿದೆ. ನನ್ನ ಮೂರು ಮಕ್ಕಳೊಂದಿಗೆ ಇರಲು‌ ಸಾಧ್ಯವಾಗೋದನ್ನ‌ ಅರಿತ ಫಾತಿಮಾ ಸಿಸ್ಟರ್ ಅವರು, ಮನೆ ನಿರ್ಮಿಸಿ ಕೊಡಲು ಯೋಚಿಸಿದ್ರು. ನಿವೇಶನ ಖರೀದಿ ಏನೋ ಆಯಿತು. ಮನೆಯ ಬೇಸ್ ಮಟ್ಟಕ್ಕೆ ತಲುಪಿತು. ಆಗ ನನಗೆ ಆರ್ಥಿಕ ಸಂಕಷ್ಟ ಎದುರಾಯಿತು. ಆಗ ಫಾತಿಮಾ ಸಿಸ್ಟರ್ ಅವರು, ವಿದ್ಯಾರ್ಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಬಳಿ‌ ಹೇಳಿ ಕೊಂಡಾಗ, ಹಣ ಎಷ್ಟುಬೇಕೆಂದ್ರು. 6 ಲಕ್ಷ ರೂ.ಗಳ‌ ಅಂದಿದ್ದರು. ಅವರು ಕ್ಷಣಾರ್ಧದಲ್ಲಿಯೇ ನಗದು ಹಣವನ್ನ ನನ್ನ‌ ಕೈಗೆ ನೀಡಿ ಕಷ್ಟಕ್ಕೆ ನೆರವಾದರು. ಅವರನ್ನು ಎಂದೂ ಮರೆಯುವ ಮಾತೇ ಇಲ್ಲ ಎಂದು‌ ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss