Tuesday, July 5, 2022

Latest Posts

ಕಲುಷಿತ ನೀರು ಸೇವನೆ: 20 ಮಂದಿ ಅಸ್ಪಸ್ಥ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಲುಷಿತ ನೀರನ್ನು ಸೇವಿಸಿ 20 ಮಂದಿ ಅಸ್ವಸ್ಥಗೊಂಡಿರುವ ದುರ್ಘಟನೆ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

ಚರಂಡಿ ನೀರು ಮಿಶ್ರಣಗೊಂಡಿದ್ದ ನೀರನ್ನು ಬಳಕೆ ಮಾಡುವುಕ್ಕೆ ಬಿಟ್ಟ ಪರಿಣಾಮ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆಗೆ ದೊಡ್ಡೆಬಾಲ ಗ್ರಾಮಪಂಚಾಯತಿ ನೌಕರರೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಲುಷಿತ ನೀರನ್ನು ಸೇವಿಸಿದವರಿಗೆ ವಾಂತಿ, ಭೇದಿಯಾಗಿ ಅಸ್ವಸ್ಥಗೊಂಡಿದ್ದು, ಗ್ರಾಮಸ್ಥರಿಗೆ ನೀರನ್ನು ಬಳಕೆ ಮಾಡದಂತೆ ತಾಲೂಕು ಪಂಚಾಯತಿ ಆಡಳಿತಕ್ಕೆ ತಿಳಿಸಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss