Friday, July 1, 2022

Latest Posts

ಕಲುಷಿತ ನೀರು ಹರಿವು ತಡೆದು ಕೆರೆ ಸಂರಕ್ಷಣೆಗೆ ಮನವಿ

ರಾಮನಗರ: ಭರ್ಗಾವತಿ ಕೆರೆಗೆ ಹರಿಯುತ್ತಿರುವ ಮಾಗಡಿ ಪಟ್ಟಣದ ಕಲುಷಿತ ನೀರನ್ನು ತಡೆ ಹಿಡಿಯಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮನವಿ ಪತ್ರ ನೀಡಿದರು.

ಈ ಸಂಬoಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ತಮ್ಮ ಪತ್ನಿ ಭರ್ಗಾವತಮ್ಮ ಅವರ ಹೆಸರಿನಲ್ಲಿ ಕೆರೆಯನ್ನು ನಿರ್ಮಿಸಿದ್ದು, ಈ ಕೆರೆಯಿಂದ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನ, ಜನುವಾರುಗಳಿಗೆ, ಹಕ್ಕಿ ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸುವುದರ ಜೊತೆಗೆ ನೂರಾರು ಹೆಕರೆ ಜಮೀನಿಗೆ ಬೇಸಾಯಕ್ಕೆ ನೀರಾವರಿಯನ್ನು ಈ ಕೆರೆಯಿಂದ ಬಳಸಿಕೊಳ್ಳಲಾಗುತ್ತಿದೆ.

ಇದಲ್ಲದೇ ಅಂತರಜಲ ಮಟ್ಟ ಹೆಚ್ಚಿದ್ದು, ಕೊಳವೆ ಬಾವಿಗಳಲ್ಲಿ ಹಾಗೂ ಬಾವಿಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿರುತ್ತದೆ. ಇಂತಹ ಭರ್ಗಾವತಿ ಕೆರೆಗೆ ಪಟ್ಟಣದ ಕಲುಷಿತ ನೀರು ಸೇರ್ಪಡೆಯಾಗುತ್ತಿರುವುದರಿಂದ ನೀರು ದುರ್ವಾಸನೆ ಬೀರುತ್ತಿದ್ದು, ಪ್ರಾಣಿ ಪಕ್ಷಿಗಳು ನೀರು ಕುಡಿಯದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದರಿಂದ ಕೆರೆಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆ ಹಿಡಿಯಬೇಕೆಂದು ತಾಲೂಕು ರೈತ ಸಂಘದ ವತಿಯಿಂದ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ನೀಡಲಾಗಿದೆ ಎಂದು ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ತಿಳಿಸಿದರು.

ಮನವಿ ಸ್ವೀಕರಿಸಿದ ಪುರಸಭೆಯ ಮುಖ್ಯಾಧಿಕಾರಿ ಮಹೇಶ್ ಮಾತನಾಡಿ, ಒಳಚರಂಡಿಯ ಕಲುಷಿತ ವೆಟ್‌ವೆಲ್‌ಗೆ ಹರಿಯಲು ರಾಜ ಕಾಲುವೆಯಲ್ಲಿ ಪೈಪ್‌ಗಳನ್ನು ಅಳವಡಿಸಲಾಗಿದೆ, ಕೆಲವರು ಮ್ಯಾನ್‌ಹೋಲ್‌ಗೆ ಜಲ್ಲಿ ಚೀಲಗಳನ್ನು ಹಾಕುತ್ತಿದ್ದಾರೆ. ಇದರಿಂದ ಮ್ಯಾನ್‌ಹೋಲ್‌ಗಳು ಸಂಪೂರ್ಣವಾಗಿ ಬ್ಲಾಕ್ ಆಗಿದ್ದು, ಕಲುಷಿತ ನೀರು ಭರ್ಗಾವತಿ ಕೆರೆಗೆ ಸೇರುತ್ತಿದೆ, ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದು, ಸೂಕ್ತ ರೀತಿಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು. ತಾಲೂಕು ರೈತ ಸಂಘದ ಯೋಗೇಶ್, ಚಿಕ್ಕಣ್ಣ, ಚಂದ್ರಣ್ಣ, ಜಗದೀಶ್, ಮಂಜುನಾಥ್, ಮಧುಗೌಡ, ರಂಗಸ್ವಾಮಿ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss