Sunday, April 11, 2021

Latest Posts

ಕಲ್ಲಿದ್ದಲು ಟ್ರಕ್ ಮಾಲಕರ ವಿಶೇಷ ‘ಕೃಪೆ ’ ಮಾಧ್ಯಮಗಳಿಗೆ ದುಡ್ಡಿನ ಸುಗ್ಗಿಯೋ ಸುಗ್ಗಿ!

ಅಸ್ಸಾಂ: ಅಸ್ಸಾಂನ ರಾಜಕೀಯ ಪಕ್ಷಗಳು ೨೦೨೧ರ ಏಪ್ರಿಲ್‌ನಲ್ಲಿ ನಡೆಯುವ ಚುನಾವಣಾ ತಯಾರಿ ಗಡಿಬಿಡಿಯಲ್ಲಿದ್ದರೆ, ಇತ್ತ ಕಲ್ಲಿದ್ದಲು ಟ್ರಕ್ ಮಾಲಕರು ನಿರ್ದಿಷ್ಟ ಪತ್ರಿಕಾಲಯಗಳು ಮತ್ತು ಟಿವಿ ಚಾನೆಲ್‌ಗಳಿಗೆ ಕೋಟಿಗಟ್ಟಲೆ ಹಣ ಸುರಿಯುತ್ತಿದ್ದಾರೆ. ಇದು ಮುಂದಿನ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷದ ಪರವಾಗೇ ಸುದ್ದಿ ಪ್ರಕಟಣೆ-ಪ್ರಚಾರಕ್ಕಾಗಿ ಆಮಿಷತಂತ್ರವಿದ್ದರೂ ಇರಬಹುದು. ಅಂತು ಈ ಅಕ್ರಮ ದುಡ್ಡಿನ ವಹಿವಾಟನ್ನು ಅತ್ಯಂತ ‘ಗೌಪ್ಯ’ವಾಗಿರಿಸಲಾಗಿದ್ದರೂ, ಈ ವಿಚಾರ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೆ ವೈರಲ್ ಆಗಿದೆ.
ಮಾಧ್ಯಮಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾದ ಬೆಳವಣಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರದಲ್ಲಿ ಅಸ್ಸಾಂನಲ್ಲಿ ಭಯಭೀತ ವಾತಾವರಣ ಸೃಷ್ಟಿಯಾಗಿದೆ ಎಂದು ‘ ಆರ್ಗನೈಸರ್’ ಶನಿವಾರದ ಆವೃತ್ತಿಯಲ್ಲಿ ಪ್ರಕಟಿಸಿದೆ.
ಗುವಾಹತಿ ಮೂಲದ ಹವ್ಯಾಸಿ ಪತ್ರಕರ್ತ ಮತ್ತು ಗುವಾಹತಿ ಪ್ರೆಸ್‌ಕ್ಲಬ್ ಮಾಜಿ ಕಾರ್ಯದರ್ಶಿ ಎನ್.ಜೆ.ಥಾಕುರಿಯ ಅವರು ಈ ಅಕ್ರಮ ‘ಡೀಲ್’ನ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿ ಆರ್ಗನೈಸರ್ ಗಮನ ಸೆಳೆದಿದ್ದರು.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss