Thursday, June 30, 2022

Latest Posts

ಕಳಚಿದ ರೋಡ್ ರೋಲರ್ ಚಕ್ರ: ತಪ್ಪಿದ ಭಾರೀ ಅನಾಹುತ

ಹೊಸ ದಿಗಂತ ವರದಿ, ಮಡಿಕೇರಿ:

ರಸ್ತೆ ಕಾಮಗಾರಿಗೆ ಹೋಗುತ್ತಿದ್ದ ರೋಡ್ ರೋಲರ್ ಚಕ್ರ ಕಳಚಿಬಿದ್ದ ಘಟನೆ ವೀರಾಜಪೇಟೆ -ಮೂರ್ನಾಡು ಮಾರ್ಗ ನಡೆದಿದೆ. ರಸ್ತೆ ಕೆಲಸಕ್ಕೆಂದು ಹೋಗುತ್ತಿದ್ದಾಗ ರೋಲರ್ ನ ಎಡಭಾಗದ ಚಕ್ರ ಕಳಚಿ ರಸ್ತೆ ಪಕ್ಕದ ಬಾಳೆ ತೋಟಕ್ಕೆ ಹೋಗಿ ಬಿದ್ದಿದೆ. ಸ್ವಲ್ಪ ದೂರದಲ್ಲೇ ಸಾರಿಗೆ ಇಲಾಖೆ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದುದರಿಂದ ರೋಡ್ ರೋಲರ್ ಎದುರಿಗೆ ಯಾವುದೇ ವಾಹನಗಳು ಬಂದಿಲ್ಲ. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ. ಕಳಚಿದ್ದರಿಂದ ರೋಲರ್ ಇಂಜಿನ್ ರಸ್ತೆ ಮಧ್ಯದಲ್ಲೇ ಬಿದ್ದಿದೆ. ಬಳಿಕ ಜೆಸಿಬಿಯ ಸಹಾಯದಿಂದ ರೋಲರ್ ಇಂಜಿನನ್ನು ರಸ್ತೆಯಿಂದ ತೆರವುಗೊಳಿಸಿದ ಪೊಲೀಸರು ಸುಗಮ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss