ಧಾರವಾಡ: ಮಹದಾಯಿ ಹಾಗೂ ಕಳಸಾ-ಬಂಡೂರಿ ನಾಲಾ ಜೋಡಣೆ ಶೀಘ್ರವೇ ಅನುಷ್ಠಾನ, ಭೂಸುಧಾರಣೆ ತಿದ್ದುಪಡಿ ಕಾಯ್ದೆ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಹದಾಯಿಗಾಗಿ ಮಹಾವೇದಿಕೆ ಜಿಲ್ಲಾ ಒಕ್ಕೂಟದಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಗುರುವಾರ ಪ್ರತಿಭಟನೆ ನಡೆಸಿಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಕೆಲಕಾಲ ಪ್ರತಿಭಟಿಸಿದ ರೈತರು, ರಾಜ್ಯದಲ್ಲಿ ರೈತರ ಹಾಗೂ ನಾಗರಿಕರ ಹಿತಕಾಯುವ ಸರ್ಕಾರವೇ ಅವೈಜ್ಞಾನಿಕ ಭೂಸುಧಾರಣೆ ಕಾಯ್ದೆ ಜಾರಿಗೆ ತರಲು ಹೊರಟಿದೆ. ಇದನ್ನು ತಕ್ಷಣವೇ ಕೈಬಿಡಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಕೋವಿಡ್- ಆಹಾರ ಕಿಟ್ ಹಾಗೂ ಆರೋಗ್ಯ ಇಲಾಖೆ ಕಿಟ್ ಮಧ್ಯವರ್ತಿಗಳ ಪಾಲಾಗುವುದು ತಡೆಯಬೇಕು. ಸಣ್ಣ ಹಿಡುವಳಿ ರೈತರಿಗೆ ನಾಲ್ಕು ಚಕ್ರ ವಾಹನ ರದ್ದತಿ ನಿಲ್ಲಿಸಬೇಕು. ಸರ್ಕಾರ ಎಲ್ಲ ಇಲಾಖೆಗಳ ಕುಂದುಕೊರತೆ ಸಭೆ ಜತೆಗೆ ಪರಿಹಾರ ಒದಗಿಸುವ ಕೆಲಸ ಮಾಡಲು ಆಗ್ರಹಿಸಿದರು.
ಎಪಿಎಂಸಿ ಕಾಯ್ದೆ ಹಾಗೂ ರೈಲ್ವೆ ಇಲಾಖೆ ಖಾಸಗೀಕರಣ ಕೈಬಿಡುವುದು, ಡಿಸೈಲ್ ಹಾಗೂ ಪೆಟ್ರೋಲ್ ಬೆಲೆ ಇಳಕೆ, ಪ್ರವಾಹಕ್ಕೆ ಒಳಗಾದ ಸಂತ್ರಸ್ತರಿಗೆ ಸುರಕ್ಷೆ ಹಾಗೂ ಪರಿಹಾರ, ಬೆಳಗಾವಿ ವಿಧಾನಸೌಧಕ್ಕೆ ಸರ್ಕಾರಿ ಕಚೇರಿಗಳ ವರ್ಗಾವಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶಂಕರ ಅಂಬ್ಲಿ, ಲಕ್ಷö್ಮಣ ಬಕ್ಕಾಯಿ, ಬಾಲಚಂದ್ರ ಸುರಪುರ, ಮುತ್ತು ಬೆಳ್ಳಕ್ಕಿ, ರಾಜು ಕಡೇಮನಿ, ಸಂಜಯ ಕುರಬೇಟ್ಟ, ಪ್ರವೀಣ ಯರಗಟ್ಟಿ, ಶೋಭಾ ಚಲವಾದಿ, ಲೀಲಾವತಿ ವಾಗ್ಮೋಡೆ ಸೇರಿದಂತೆ ಅನೇಕರು ಇದ್ದರು.