Thursday, August 18, 2022

Latest Posts

ಕಳೆದ ಆರು ವರ್ಷಗಳಿಂದ ಭರ್ತಿ ಆಗಿಲ್ಲ ಕ್ಷಯ ರೋಗ ವಿಭಾಗದ ಹುದ್ದೆಗಳು: ಗಾಳಿಗೆ ತೂರಿದ ಕೇಂದ್ರ ಸರ್ಕಾರದ ಮಾರ್ಗಸೂಚಿ

ಹಾವೇರಿ: ಆರೋಗ್ಯ ಇಲಾಖೆಯಲ್ಲಿನ ಕ್ಷಯ ರೋಗ ನಿಯಂತ್ರಣಾ ಘಟಕದಲ್ಲಿ ಪ್ರಸಕ್ತ ಭರ್ತಿ ಮಾಡಿಕೊಳ್ಳಲಾಗಿರುವ ತಾತ್ಕಾಲಿಕ ಹುದ್ದೆಗಳ ನೇಮಕವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿಗಳನ್ನು ಗಾಳಿಗೆ ತೂರಿ ಆಯ್ಕೆ ಮಾಡಿಕೊಳ್ಳಲಾಗಿದೆ. . ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಧೀನದಲ್ಲಿ ಬರುವ ಜಿಲ್ಲಾ ಕ್ಷಯ ರೋಗ ನಿಯಂತ್ರಣಾ ಘಟಕದಲ್ಲಿನ ಸಿನಿಯರ್ ಟ್ರೀಟಮೆಂಟ್ ಸುಪ್ರವೈಸರ್ ಹಾಗೂ ಟ್ಯುಬರಕ್ಯುಲಸ್ ಹೆಲ್ತ್ ವಿಸಿಟರ್ ಹುದ್ದೆಗಳ ಪರಿಷ್ಕೃತ ರಾಷ್ಟ್ರೀಯ ಕ್ಷಯ ರೋಗ ನಿಯಂತ್ರಣಾ ಘಟಕದ ಮಾರ್ಗ ಸೂಚಿಗಳನ್ನು ಅನುಸರಿಸದೇ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂಬ ದೂರುಗಳು ಈಗ ಆರೋಗ್ಯ ಇಲಾಖೆಯ ಪಡಸಾಲೆಯಲ್ಲಿ ಮಾತುಗಳು ಕೇಳಿಬರುತ್ತಿವೆ.
ಜಿಲ್ಲೆಯಲ್ಲಿ ಖಾಲಿ ಇರುವ ಎಟಿಎಸ್ ಮತ್ತು ಟಿಬಿಹೆಚ್‌ವಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ ೨೦೧೩ರಲ್ಲಿನೇ ಮಂಜೂರಾತಿ ದೊರೆತಿದ್ದರೂ ಆಯ್ಕೆ ಸಂದರ್ಭದಲ್ಲಿ ಮಾಡಲಾಗು ಗೋಲ್‌ಮಾಲ್‌ದಿಂದಾಗಿ ಇಂದಿನವರೆಗೂ ನೇಮಕಮಾಡಿಕೊಳ್ಳಲಾಗಿಲ್ಲ.
೨೦೧೩ರಲ್ಲಿ ಮಂಜೂರಾದ ಹುದ್ದಗಳಿಗೆ ೨೦೧೪ರಲ್ಲಿ ಭರ್ತಿಗೆ ಪ್ರಕಟಣೆಯನ್ನು ನೀಡಲಾಗಿತ್ತು. ಹುದ್ದೆಗಳ ನೇಮಕಾತಿ ಪ್ರಕ್ರೀಯೆಯೂ ಜರುಗಿತ್ತು ಆದರೆ ಆಯ್ಕೆ ಪಟ್ಟಿಯನ್ನು ಮಾತ್ರ ಪ್ರಕಟಿಸಲೇಯಿಲ್ಲ. ಆ ನಂರತರದಲ್ಲಿ ೨೦೧೬, ೨೦೧೮, ೨೦೧೯ ಮತ್ತು ೨೦೨೦ರ ಜನೇವರಿಯಲ್ಲಿ ಅವೇ ಹುದ್ದೆಗಳ ನೆಮಕಾತಿ ಪ್ರಕ್ರೀಯೆಯನ್ನು ನಡೆಸಲಾಗಿದೆ.
ಆದರೆ, ಈ ನೇಮಕಾತಿಯ ತಾತದ್ಕಾಲಿಕ ಆಯ್ಕೆ ಪಟ್ಟಿಯನ್ನು ಆರ್‌ಎನ್‌ಟಿಸಿಪಿ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಕಂಡುಬರುತ್ತಿದೆ.
ಈ ಮಾರ್ಗಸೂಚಿಯಲ್ಲಿ ಆರೋಗ್ಯ ಶಿಕ್ಷಣಕ್ಕೆ ಸಂಬಂಧಿಸಿದ ಮಲ್ಟಿ ಪರ್‌ಪೋಸ್ ಹೆಲ್ತ ವರ್ಕ್‌ರ ಹಾಗೂ ಸ್ನಾನಿಟರಿ ಇನೆಸ್ಪೆಕ್ಟರ್ ಶಿಕ್ಷಣವನ್ನು ಪಡೆದವರಿಗೆ ಮೊದಲ ಆದ್ಯತೆಯನ್ನು ನೀಡಬೇಕು. ಈ ಶಿಕ್ಷಣ ಪಡೆದವರು ಇಲ್ಲದಿದ್ದರೆ ಯವುದಾದರೂ ಪದವಿಯನ್ನು ಪಡೆದುಕೊಂಡವರಿಗೆ ಆದ್ಯತೆಯನ್ನು ನೀಡಬೇಕು ಎಂದಿದೆ.
ಆದರೆ ಈ ಕೋರ್ಸ್ ಮಾಡಿದವರಿಗೆ ಕೇವಲ ಶೇ.೨ರಷ್ಟು ಗ್ರೇಸ್ ಮಾರ್ಕ್ಸ್‌ಗಳನ್ನು ನೀಡಿ ಕೈತೊಳೆದುಕೊಳ್ಳಲಾಗಿದೆ ಎನ್ನುವುದು ಕೆಲವರ ವಾದ.
ಪ್ರಸಕ್ತ ಆಯ್ಕೆ ಪ್ರಕ್ರೀಯೆಯಲ್ಲಿ ಕ್ಷಯ ರೋಗ ವಿಭಾಗದಲ್ಲಿ ಅನೇಕ ವರ್ಷಗಳಿಂದ ಅನುಭವ ಇದ್ದವರನ್ನು ಸಹ ಪರಿಗಣೆಗೆ ತಗೆದುಕೊಳ್ಳಲಾಗಿಲ್ಲ. ಜಿಲ್ಲೆಯ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡದೇ ಬೇರೆ ಜಿಲ್ಲೆಯವರಿಗೆ ಆದ್ಯತೆಯನ್ನು ನೀಡಲಾಗಿದೆ.
೨೦೧೪ರಲ್ಲಿ ಕರೆಯಲಾಗಿದ್ದ ಟಿಬಿಹೆಚ್‌ಡಬ್ಲೂ ಎರಡು ಹುದ್ದೆಗಳಲ್ಲಿ ಒಂದು ಸಾಮಾನ್ಯ ಮತ್ತು ಇನ್ನೊಂದು ಪರಿಶಿಷ್ಟ ಜಾತಿಗೆ ಮೀಸಲಿರಿಸಲಾಗಿತ್ತು. ಸರ್ಕಾರದ ನಿಯಮಾನುಸಾರ ೩
೪ ವರ್ಷಗಳ ಕಾಲ ಪ.ಜಾ ಮೀಸಲಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳದಿದ್ದರೆ ಆ ಹುದ್ದೆಯನ್ನು ಬ್ಯಾಕ್‌ಲಾಗ್ ಹುದ್ದೆ ಎಂದು ಪರಿಗಣಿಸಿ ಆಯ್ಕೆ ಪ್ರಕ್ರೀಯೆಯನ್ನು ಮಾಡಬೇಕು ಆದರೆ ೨೦೨೦ರ ಜನೇವರಿಯಲ್ಲಿ ಪ್ರಕಟಣೆಯಲ್ಲಿ ಮಾತ್ರ ಕೇವಲ ಪ.ಜಾಗೆ ಮೀಸಲಿರುವ ಹುದ್ದೆ ಎಂದು ಕರೆಯಲಗಿದೆ. ಇಲ್ಲಿನೂ ನಿಯಮವನ್ನು ಅನುಸರಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಖಾಲಿ ಇರುವ ಕೆಲ ಹುದ್ದೆಗಳ ನೇಮಕಾತಿಗೆ ಕಳೆದ ಐದು ವರ್ಷಗಳ ಹಿಂದೆನೇ ಮಂಜೂರಾತಿ ದೊರೆತಿದ್ದರೂ ಇಂದಿನವರೆಗೂ ನೇಮಕಾತಿ ಮಾಡಿಕೊಂಡಿಲ್ಲ.

ಗಾಳಿಗೆ ತೂರಲಾಗಿದೆ
ಆಯ್ಕೆ ಪ್ರಕ್ರೀಯೆಯಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣಾ ಘಟಕದ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಕ್ಷಯರೋಗ ನಿಯಂತ್ರಣಾ ಘಟಕದಲ್ಲಿ ಅನೇಕ ವರ್ಷಗಳ ಅನುಭವ ಇದ್ದವರನ್ನು ಪರಿಗಣನೆಗೆ ತಗೆದುಕೊಳ್ಳಲಾಗಿಲ್ಲ. ಜಿಲ್ಲೆಯವರಿಗೆ ಆದ್ಯತೆಯನ್ನು ನೀಡಲಾಗಿಲ್ಲ. ಪ್ರಿಫೆರರ್ನ್ಸ್ ಕೋರ್ಸ್ ಮಾಡಿದವರಿದ್ದರೆ ಅವರಿಗೆ ಮೊದಲ ಆದ್ಯತೆ ನೀಡಬೇಕು. ಇಲ್ಲಿಯವರೆಗೆ ಬಂದ ಅನುದಾನ ಬಳಕೆ ಆಗದೇ ಮರಳಿಹೋಗಿದೆ. ಇದರಿಂದ ಟಿಬಿ ಪೀಡಿತರಿಗೆ ಸೂಕ್ತ ಚಿಕಿತ್ಸೆ ದೊರೆಯದಂತಾಗಿದೆ.

ನಿಯಮಾನುಸಾರವೇ ಆಯ್ಕೆ ಮಾಡಿದೆ
ಆಯ್ಕೆ ಸಮೀತಿಯು ನಿಯಮಾನುಸಾರವೇ ಆಯ್ಕೆಯನ್ನು ಮಾಡಿದೆ. ಕೆಲವರು ಆಯ್ಕೆ ಪಟ್ಟಿಗೆ ತಕರಾರನ್ನು ಸಲ್ಲಿಸಿದ್ದು ಈ ಕುರಿತು ರಾಜ್ಯ ಸರ್ಕಾರಕ್ಕೆ ಮಾಹಿತಿಯನ್ನು ನೀಡಲಾಗುವುದು. ಈ ಆಯ್ಕೆ ಪ್ರಕ್ರೀಯೆ ಎನ್‌ಹೆಚ್‌ಎಂ ನಿಯಮಾನುಸಾರ ನಡೆಯುವದರಿಂದ ರಾಜ್ಯ ಸರ್ಕಾರದ ಕೆಲ ನಿಯಮಗಳು ಅನ್ವಯವಾಗುವುದಿಲ್ಲ.
 ಡಾ. ರಾಜೇಂದ್ರ ದೊಡ್ಡಮನಿ, ಡಿಹೆಚ್‌ಓ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!