Wednesday, August 17, 2022

Latest Posts

ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಗೋ ಸಾಗಾಟ ಪ್ರಕರಣ: ಗೋ ಸಾಗಾಟಕ್ಕೆ ವರವಾಯಿತೇ ಲಾಕ್‌ಡೌನ್?

ಕುಂದಾಪುರ: ಬಕ್ರೀದ್ ಸಮೀಪಿಸುತ್ತಿದ್ದಂತೆ ಜಿಲ್ಲೆಯಾದ್ಯಂತ ಅಕ್ರಮ ಗೋ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯಲ್ಲಿ ಈ ವರ್ಷ ಬರೋಬ್ಬರಿ 41 ಕ್ಕೂ ಹೆಚ್ಚು ಅಕ್ರಮ ಗೋ ಸಾಗಾಟ,ಕಳ್ಳತನ, ಮಾಂಸ ಸಾಗಾಟ ಪ್ರಕರಣಗಳು ದಾಖಲಾಗಿವೆ. ಅದರಲ್ಲೂ ಲಾಕ್ ಡೌನ್ ಅವಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಗೋ ಕಳ್ಳತನ ಪ್ರಕರಣಗಳು ಹೆಚ್ಚು ದಾಖಲಾಗಿದೆ.
ಬಕ್ರೀದ್ ಸಮಯದಲ್ಲಿ ಅತೀ ಹೆಚ್ಚು ಪ್ರಕರಣಗಳು
ಗೋ ಮಾತೆಯನ್ನು ಬಲಿಕೊಡುವ ಮೂಲಕ ಕ್ರೂರ ಹಬ್ಬವನ್ನು ಆಚರಿಸುವ ಬಕ್ರೀದ್ ಗೆ ಮುಸ್ಲಿಂ ಜಿಹಾದಿಗಳು ಹಿಂದುಗಳ ಮನೆಯ ದನಗಳನ್ನು ಕದ್ದು ಸಾಗಾಟ ಮಾಡುತ್ತಿದ್ದಾರೆ. ಬೀಡಾಡಿ ದನಗಳನ್ನು ಕದ್ದು ಸಾಗಾಟ ಮಾಡುವುದು ಕಳೆದ ಕೆಲವು ದಶಕಗಳಿಂದ ಜಾಸ್ತಿಯಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚು ದಾಖಲಾಗುತ್ತಿದ್ದು, ಅಕ್ರಮ ಗೋ ಸಾಗಾಟ ಪ್ರಕರಣಗಳು ಉಲ್ಬಣವಾಗುತ್ತಿದೆ. ಕ್ರೂರವಾಗಿ ಒಂದು ಕಂಟೈನರ್ ನಲ್ಲಿ 50 ಕ್ಕೂ ಅಧಿಕ ಜಾನುವಾರುಗಳನ್ನು ಸಾಗಿಸಿದ ಪ್ರಕರಣ ಕಳೆದ ವಾರ ಜಿಲ್ಲೆಯಲ್ಲಿ ದಾಖಲಾಗಿದೆ.
ಪೋಲಿಸರಿಗೆ ಸವಾಲು
ಕೊರೋನಾ ವೈರಾಣುವಿನ ನಡುವೆ ಗೋ ಕಳ್ಳರು, ದನಗಳನ್ನು ಕದ್ದು ಅಕ್ರಮ ಗೋ ಸಾಗಾಟ ಮಾಡುವುದನ್ನು ವ್ಯವಸ್ಥಿತವಾಗಿ ಕಂಟೈನರ್‌ಗಳಲ್ಲಿ ಹಿಂಸಾತ್ಮಕ ರೀತಿಯಲ್ಲಿ ಮಾಡುತ್ತಿದ್ದಾರೆ. ವಾಹನದ ಚಾಲಕರನ್ನು, ವಾಹನವನ್ನು ತಪಾಸಣೆ ಮಾಡುವಾಗ ವಾಹನದಲ್ಲಿದ್ದವರಿಗೆ ಕೊರೋನಾ ಸೋಂಕು ಇದ್ದರೆ ಪೊಲೀಸರಿಗೂ ಸೋಂಕು ಹರಡುವ ಸಾಧ್ಯತೆ ಇದೆ.
ಪೊಲೀಸರ ನಿಗಾ ತಪ್ಪಿಸಿ ಅಕ್ರಮ ಸಾಗಾಟ
ಅಕ್ರಮ ಗೋ ಸಾಗಾಟ ಪ್ರಕರಣಗಳು ಹೆಚ್ಚುತ್ತಿದ್ದಂತೆ ಜಿಲ್ಲೆಯ ಗಡಿ ಭಾಗಗಳಲ್ಲಿ ಮತ್ತು ತೀರ ಗ್ರಾಮೀಣ ಪ್ರದೇಶದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ತಪಾಸಣೆ ಬಿಗಿಗೊಳಿಸಿದ್ದಾರೆ. ಆದರೂ ಕೆಲವು ಕಡೆ ದಲ್ಲಾಳಿಗಳ ಮತ್ತು ಚೆಕ್‌ಪೋಸ್ಟ್‌ನ ಬಗ್ಗೆ ಮಾಹಿತಿ ಅರಿತವರ ಸಹಕಾರದಿಂದ ಪೊಲೀಸರ ಕಣ್ಣು ತಪ್ಪಿಸಿಕೊಳ್ಳುತ್ತಾರೆ. ಕಂಡ್ಲೂರು, ಹೊಸಂಗಡಿ, ಅಂಪಾರು, ಸೋಮೇಶ್ವರ, ಮಲ್ಪೆ, ನೇಜಾರು, ಸಂತೆಕಟ್ಟೆ, ಸಾಸ್ತಾನ, ಪೆರಂಪಳ್ಳಿ, ಆರೂರು, ಬಾರೂಕೂರು ಹಾಗೂ ಇನ್ನು ಅನೇಕ ಕಡೆ ಪೊಲೀಸ್ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ.
ಕೃಷ್ಣನೂರಿಗೆ ಬೇಕಿದೆ ಪ್ರತೀ ದೇವಾಲಯಕ್ಕೊಂದರಂತೆ ಗೋ ಶಾಲೆ
ಪೊಡವಿಗೊಡೆಯನ ನಾಡಿನಲ್ಲಿ ಅಷ್ಠ ಮಠಗಳಿವೆ. ನೂರಾರು ಶ್ರೀಮಂತ ದೇವಾಲಯಗಳಿವೆ. ಆದರೆ ಇಡೀ ಜಿಲ್ಲೆಯಲ್ಲಿ ಕೇವಲ 5 ಗೋ ಶಾಲೆ ಮಾತ್ರ ಇದೆ. ನೀಲಾವರ, ಕೊಡವೂರು, ಶಿರೂರು, ಹೂವಿನ ಕೆರೆ ಹಾಗೂ ಹೆಬ್ರಿಯಲ್ಲಿ ಮಾತ್ರ ಗೋ ಶಾಲೆಗಳಿದ್ದು ಇಲ್ಲಿ ಹೆಚ್ಚೆಚ್ಚು ದನಗಳನ್ನು ಸಾಕುತ್ತಾರೆ. ಆದರೆ ಜಿಹಾದಿಗಳು ಪಶ್ಚಿಮ ಘಟ್ಟ, ಸಾಗರದಿಂದೆಲ್ಲಾ ದನಗಳನ್ನು, ಕೋಣಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಜಿಲ್ಲೆಯ ಗಡಿಯಲ್ಲಿ ಸಿಕ್ಕಿ ಬಿದ್ದರೆ ಅದನ್ನು ಇಲ್ಲಿ ಆರೈಕೆ ಮಾಡಲು ಗೋ ಶಾಲೆಗಳ ಸಂಖ್ಯೆ ಕಡಿಮೆ ಇದೆ.
ಮಂಗಳೂರಿಗೆ ಅತೀ ಹೆಚ್ಚು ಸಾಗಣೆ
ದೂರದ ಶಿವಮೊಗ್ಗ, ಸಾಗರ ಹಾಗೂ ಪಶ್ಚಿಮ ಘಟ್ಟ ಮಾತ್ರವಲ್ಲದೇ ಕುಂದಾಪುರ, ಬೈಂದೂರು, ಅಮಾಸೆಬೈಲು, ಹೆಬ್ರಿ ಸುತ್ತಮುತ್ತಲಿನ ಪರಿಸರದಲ್ಲಿ ಗೋವುಗಳನ್ನು ಕದ್ದು ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುವುದ ಜಾಲಾ ಕರಾವಳಿಯಾದ್ಯಂತ ಹಬ್ಬಿದ್ದು ಕೇರಳಕ್ಕೆ ರವಾನೆ ಮಾಡುತ್ತಾರೆ. ಆದರೆ ಆತಂಕಕಾರಿಯಾಗಿ ಬೆಳವಣಿಗೆಯೊಂದು ಕಂಡುಬಂದಿದ್ದು ಈ ಬಾರಿ ಅತೀ ಹೆಚ್ಚು ಗೋವುಗಳನ್ನು ಮಂಗಳೂರಿಗೆ ಸಾಗಾಟ ಮಾಡಲಾಗಿದೆ.
ದನದ ಮಾಂಸವನ್ನು ರಫ್ತು ಮಾಡುವ ಜಾಲ ಬೀಡು ಬಿಟ್ಟಿದೆ
ಗೋವುಗಳನ್ನು ಕಾಡುಗಳಲ್ಲಿ ಹತ್ಯೆ ಮಾಡಿ ಪಾರ್ಸೆಲ್‌ಗಳ ರೂಪದಲ್ಲಿ ಪ್ಯಾಕ್ ಮಾಡಿ ದನದ ಮಾಂಸವನ್ನು ಬಸ್‌ಗಳು, ಮೀನಿನ ಲಾರಿಯ ಮಧ್ಯದಲ್ಲಿ, ಸ್ಕಾರ್ಪಿಯೊದಲ್ಲಿ ಸಾಗಾಟ ಮಾಡುವುದು ಬೆಳಕಿಗೆ ಬಂದಿದೆ. ಕಳೆದ ವರ್ಷ ಮುದ್ರಾಡಿಯಲ್ಲಿ ಮನೆಯ ಕೊಟ್ಟಿಗೆಗೆ ನುಗ್ಗಿ ಗೋವುಗಳನ್ನು ಕದ್ದಿದ್ದು ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡಿತ್ತು.
ದಲ್ಲಾಳಿಗಳ ವ್ಯವಸ್ಥಿತ ಷಡ್ಯಂತ್ರ
ಗೋವುಗಳನ್ನು ಮನೆಯವರ ಬಳಿ ಕೊಂಡುಕೊಂಡು ಹಾಗೂ ಕೆಲವು ಗೋವುಗಳನ್ನು ಕದ್ದು ನಿಗದಿತ ಸ್ಥಳದಲ್ಲಿ ಒಟ್ಟು ಸೇರಿಸಿ ಕಂಟೈನರ್, ಲಾರಿಗಳಲ್ಲಿ ಸಾಗಿಸುವ ಕೆಲಸವನ್ನು ದಲ್ಲಾಳಿಗಳು ತುಂಬಾ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ದಲ್ಲಾಳಿಗಳ ಪೈಕಿ ಜನ್ಮತಃ ಹಿಂದುವಾಗಿ ಅಕ್ರಮಿಗಳಿಗೆ ಪ್ರೋತ್ಸಾಹಿಸುವ ಕೆಲವು ಜನರು ಇದರಲ್ಲಿ ಶಾಮೀಲಾಗಿರುವುದು ಸಾಭೀತಾಗಿದೆ. ದಲ್ಲಾಳಿಗಳ ವಿರುದ್ದ ಜಿಲ್ಲೆಯ ಅನೇಕ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.
ಬೆಳಕಿಗೆ ಬಾರದೇ ಉಳಿದ ಪ್ರಕರಣಗಳು ಸಾವಿರಾರು
ತನ್ನ ಮನೆಯ ಕಾಮಧೇನುವನ್ನು ಕಳೆದುಕೊಂಡ ಕೃಷಿಕ ಪೊಲೀಸ್ ಠಾಣೆಯ ಮೇಟ್ಟಿಲೇರಿ ಕೋರ್ಟ್ ಕಚೇರಿ ಅಲೆದಾಡಲು ಹಿಂಜರಿಯುತ್ತಾನೆ. ಮೊದಲೇ ಮಾನಸಿಕವಾಗಿ ಜರ್ಜರಿತರಾಗಿದ್ದ ಮನೆಯವರು ದೇವರ ಮೇಲೆ ಭಾರ ಹಾಕಿ ಸುಮ್ಮನಿದ್ದ ಪ್ರಕರಣಗಳು ಒಂದೆಡೆಯಾದರೆ, ಬೀಡಾಡಿ ದನಗಳ ಲೆಕ್ಕ ಯಾರಿಗೂ ಇರುದಿಲ್ಲ. ಅಂತಹ ದನಗಳನ್ನು ಕದ್ದು ಹತ್ಯೆ ಮಾಡುವವರ ತಂಡ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಇದನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಫಲವಾಗಿದೆ.
ಚಲೋ ಮುದ್ರಾಡಿಯ ಮೂಲಕ ಅಕ್ರಮ ಗೋ ಕಳ್ಳತನದ ವಿರುದ್ದ ಸಿಡಿದೆದಿದ್ದ ಗೋ ಪ್ರೇಮಿಗಳು
ಕಳೆದ ಬಾರಿ ಹೆಬ್ರಿಯ ಮುದ್ರಾಡಿಯಲ್ಲಿ ದೋಗು ಪೂಜಾರಿಯವರ ಮನೆಯ ಕೊಟ್ಟಿಗೆಗೆ ನುಗ್ಗಿ 6 ದನಗಳನ್ನು ಕದ್ದ ನಂತರ ಗೋ ಪ್ರೇಮಿ ಯುವಕರು ಹಾಗೂ ಹಿಂ.ಜಾ.ವೇ ಸೇರಿಕೊಂಡು ಚಲೋ ಮುದ್ರಾಡಿ ಹೋರಾಟ ನಡೆಸಿತ್ತು. ಇದರ ನಂತರ ಪೊಲೀಸ್ ಇಲಾಖೆ ಇನ್ನಷ್ಟು ಜಾಗೃತವಾಗಿತ್ತು ಹಾಗೂ ಗೋ ಸಾಗಾಟ ಪ್ರಕರಣಗಳು ಕಡಿಮೆಯಾಗಿದ್ದವು. ಈಗ ಅಂತದೇ ಮತ್ತೊಂದು ಹೋರಾಟ ಕರಾವಳಿ ಭಾಗದಲ್ಲಿ ನಡೆಯುವ ಪರಿಸ್ಥಿತಿ ನಿರ್ಮಾಣ ಆಗಿದೆ.
ಗೊ ಕಳ್ಳರ ವಿರುದ್ಧ ಸರಿಯಾದ ಕಾನೂನು ಇನ್ನು ಬಂದಿಲ್ಲ
ಗೋ ಕಳ್ಳತನ ಅಥವಾ ಅಕ್ರಮ ಸಾಗಾಟ ಮಾಡುವವರಿಗೆ ಇನ್ನು ಕೂಡ ಯಾವುದೆ ಕಠಿಣ ಶಿಕ್ಷೆ ಜಾರಿಯಾಗದಿರುವುದರಿಂದ ಇಂತಹ ಪ್ರಕರಣಗಳು ದಿನ ಕಳೆದಂತೆ ಏರಿಕೆಯಾಗುತ್ತಿವೆ. ಈ ಆರೋಪಿಗಳಿಗೆ ಸ್ಟೇಷನ್ ಬೇಲ್ ಮೂಲಕ ಬಿಡಲಾಗುತ್ತದೆ. ಇವರು ದನಗಳನ್ನು ಕೋರ್ಟ್‌ನಲ್ಲಿ ಬಿಡಿಸಿಕೊಂಡು ಮಾಂಸಕ್ಕಾಗಿ ಉಪಯೋಗಿಸುತ್ತಾರೆ. ಮತ್ತೆ ಆ ಪ್ರಕರಣ ನ್ಯಾಯಾಲಯಕ್ಕೆ ಬರುವಾಗ 2 ವರ್ಷ ದಾಟಿದ್ದು ದನಗಳು ಪ್ರಕೃತಿ ಸಹಜವಾಗಿ ಸತ್ತಿವೆ ಎಂದು ಈ ಗೋ ಕಳ್ಳರು ಸಹಜವಾಗಿ ಪ್ರಕರಣದಿಂದ ಜಾರಿ ಕೊಳ್ಳುತ್ತಾರೆ.
ಗೋ ಕಳ್ಳತನ ಪ್ರಕರಣಗಳು ಜಾಸ್ತಿ 
ಜಿಲ್ಲೆಯಾದ್ಯಂತ ಗೋ ಕಳ್ಳತನ ಪ್ರಕರಣಗಳು ಜಾಸ್ತಿಯಾಗಿದ್ದು ಬೈಂದೂರಿನಲ್ಲಿ 6, ಅಮಾಸೆಬೈಲು 1, ಶಂಕರನಾರಾಯಣ 1, ಕುಂದಾಪುರ ಗ್ರಾಮಾಂತರ 2, ಕುಂದಾಪುರ ನಗರ 4, ಕೊಲ್ಲೂರು 1, ಶಿರ್ವ 1, ಅಜೆಕಾರ್ 1, ಪಡುಬಿದ್ರಿ 1, ಕಾರ್ಕಳ ಗ್ರಾಮಾಂತರ 2, ಕಾರ್ಕಳ ನಗರ 1, ಕಾಪು 7, ಹಿರಿಯಡ್ಕ 1, ಬ್ರಹ್ಮಾವರ 1, ಕೋಟ1 ಪ್ರಕರಣಗಳು 2020 ರ ಜನವರಿಯಿಂದ ಜೂ. 28 ರ ವರೆಗೆ ದಾಖಲಾಗಿದೆ.

ಅಕ್ರಮ ಗೋ ಸಾಗಾಟ ಹಾಗೂ ಗೋ ಹತ್ಯೆಗಳು ಹೆಚ್ಚಳ
ಬಕ್ರೀದ್ ಸಮೀಪಿಸುತ್ತಿದೆ. ಅವಿಭಜಿತ ದ.ಕ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಗೋ ಹತ್ಯೆಗಳು ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ದ.ಕ ಜಿಲ್ಲಾಧಿಕಾರಿ ಅವರ ಹೇಳಿಕೆ ಗೊ ಕಳ್ಳರಿಗೆ ಪುಷ್ಟಿ ನೀಡುವಂತಿದೆ. ಆದ ಕಾರಣ ಎರಡು ಜಿಲ್ಲೆಯಲ್ಲಿ ಪೊಲೀಸಿಂಗ್ ವ್ಯವಸ್ಥೆ ಬಿಗಿಗೊಳಿಸಿ ಚೆಕ್‌ಪೋಸ್ಟ್‌ಗಳಲ್ಲಿ ಬಿಗಿ ತಪಾಸಣೆ ನಡೆಸಬೇಕು. ಇಲ್ಲವಾದಲ್ಲಿ ಹಿಂದು ಸಂಘಟನೆಗಳು ತಕ್ಕ ಪ್ರತಿಕ್ರಿಯೆ ನೀಡಬೇಕಾಗುತ್ತದೆ
ಅವಿನಾಶ್ ಶೆಟ್ಟಿ ಬೆಳ್ವೆ, ಜಿಲ್ಲಾ ಪ್ರಚಾರ ಪ್ರಮುಖ್, ಉಡುಪಿ ಜಿಲ್ಲೆ, ಹಿಂ.ಜಾ.ವೇ

ಪರವಾನಿಗೆ ಇಲ್ಲದ ವಾಹನಗಳಲ್ಲಿ ಪ್ರಾಣಿಗಳ ಸಾಗಾಟ ಕಾನೂನಿನ ಪ್ರಕಾರ ಅಪರಾಧ
ಕರ್ನಾಟಕ ಗೋವಧೆ ಪ್ರತಿಬಂಧಕ ಅನಿಯಮ 1964 ರ ಅನ್ವಯ ಯಾವುದೇ ಜಾನುವಾರುಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಾಟ ಮಾಡುವಾಗ ಪಶುವೈದ್ಯರಿಂದ ಅಕೃತ ಪ್ರಮಾಣ ಪತ್ರ ಕಡ್ಡಾಯವಾಗಿ ಇರಬೇಕು. ಪ್ರತಿಯೊಂದು ಜಾನುವಾರು ಸಾಗಾಟ ಮಾಡುವಾಗ ವಾಹನದಲ್ಲಿ ಕನಿಷ್ಟ 2 ಸ್ಕ್ವೇರ್ ಮೀ. ಸ್ಥಳಾವಕಾಶ ಇರಬೇಕು.
ಪ್ರಾಣಿ ಹಿಂಸೆ ಪ್ರತಿಬಂಧಕ ಅನಿಯಮ 1960ರ ಪ್ರಕಾರ ಯಾವುದೇ ಆಕಳು, ಕರುಗಳನ್ನು ರಾಜ್ಯದಲ್ಲಿ ವಧೆ ಮಾಡತಕ್ಕದ್ದಲ್ಲ ಅಥವಾ ವಧೆಗಾಗಿ ಹೊರ ರಾಜ್ಯಕ್ಕೆ ಸಾಗಾಣಿಕೆ ಮಾಡುವುದನ್ನು ನಿಷೇಸಲಾಗಿದೆ. ಮತ್ತು ಪ್ರಾಣಿಗಳನ್ನು ಸಾಗಣೆ ಮಾಡುವ ವಾಹನಗಳಿಗೂ ಕೂಡ ಸೂಕ್ತ ಪರವಾನಿಗೆ ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪಡೆದುಕೊಂಡಿರಬೇಕು.
ಇಂತಹ ಪರವಾನಿಗೆ ಇಲ್ಲದ ವಾಹನಗಳಲ್ಲಿ ಪ್ರಾಣಿಗಳ ಸಾಗಾಟ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಖಾಯ್ದೆ ಉಲ್ಲಂಘಿಸುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು
ಶಶಾಂಕ್ ಶಿವತ್ತಾಯ , ವಕೀಲರು, ಉಡುಪಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!