Thursday, July 7, 2022

Latest Posts

ಕಳೆದ ಹತ್ತು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶ್ರೀಲಂಕಾ ಪ್ರವಾಸೋದ್ಯಮ ಮತ್ತೆ ಪುನರಾರಂಭ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾದಿಂದ ಕಳೆದ ಹತ್ತು ತಿಂಗಳಿನಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ಶ್ರೀಲಂಕಾದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮತ್ತೆ ಗುರುವಾರದಿಂದ ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲಾಗಿದೆ.
ಈ ಮೂಲಕ ಪ್ರವಾಸಿಗರ ಆಗಮನಕ್ಕೆ ಶ್ರೀಲಂಕಾದ ಪ್ರವಾಸೋದ್ಯಮ ಮತ್ತೆ ತೆರೆದುಕೊಂಡಿದೆ. ಪ್ರವಾಸಿಗರು ತಮ್ಮ ದೇಶಗಳಿಂದ ವಿಮಾನಯಾನ ಆರಂಭಿಸುವ 72 ಗಂಟೆಗಳಿಗೆ ಮುನ್ನ ಕೋವಿಡ್ 19 ಪರೀಕ್ಷೆಗೆ ಒಳಪಟ್ಟಿರಬೇಕು.‌
ವಿದೇಶಿ ಪ್ರವಾಸಿಗರು ಶ್ರೀಲಂಕಾದಲ್ಲಿನ ಹೊಟೇಲ್ ಗೆ ಬಂದು, ಏಳು ದಿನಗಳ ನಂತರ ಪುನಃ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾಗೆಯೇ ಪ್ರವಾಸಿಗರು ಸ್ಥಳೀಯರೊಂದಿಗೆ ಬೆರೆಯದೇ, ತಮಗೆ ಗೊತ್ತುಪಡಿಸಿದ ಹೊಟೇಲ್ ‌ಗಳಲ್ಲೇ ಉಳಿಯಬೇಕು. ಶ್ರೀಲಂಕಾದಲ್ಲಿ ವಿದೇಶಿ ಪ್ರವಾಸಿಗರ ವಸತಿಗಾಗಿ 180 ಹೊಟೇಲ್ ‌ಗಳನ್ನು ಮೀಸಲಿಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss