Friday, August 12, 2022

Latest Posts

ಕಳೆದ 24 ಗಂಟೆಗಳಲ್ಲಿ 52,123 ಮಂದಿ ಸೋಂಕಿತರು: ಭಾರತದಲ್ಲಿ 10.20 ಲಕ್ಷ ಮಂದಿ ಕೊರೋನಾದಿಂದ ಗುಣಮುಖ

ಹೊಸದಿಲ್ಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಳೆದ 24 ಗಂಟೆಗಳಲ್ಲಿ 52,123 ಪ್ರಕರಣೆಗಳು ಪತ್ತೆಯಾಗಿದೆ.
ದೇಶದಲ್ಲಿ 15,83,792 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 5,28,242 ಸಕ್ರಿಯ ಪ್ರಕರಣಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಕಳದೆ 24 ಗಂಟೆಗಳಲ್ಲಿ ಕೊರೋನಾ ಸೋಂಕಿಗೆ 775 ಮಂದಿ ಬಲಿಯಾಗಿದ್ದು, ದೇಶದಲ್ಲಿ ಈವರೆಗೂ 34,968 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 3,91,440ಕ್ಕೆ ಏರಿಕೆಯಾಗಿದ್ದು, 2,32,277ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ತಮಿಳುನಾಡಿನಲ್ಲಿ 2,27,688 ಮಂದಿ ಸೋಂಕಿತರಿದ್ದು, 1,66,956 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 1,32,275 ಕೊರೋನಾ ಪ್ರಕರಣಗಳಿದ್ದು, 1,17,507 ಜನ ಗುಣಮುಖರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss