Wednesday, August 10, 2022

Latest Posts

ಕಳೆದ 24 ಗಂಟೆಗಳಲ್ಲಿ 57,117 ಕೊರೋನಾ ಪ್ರಕರಣಗಳು: 17 ಲಕ್ಷದ ಗಡಿಯಲ್ಲಿ ದೇಶದ ಸೋಂಕಿತರ ಸಂಖ್ಯೆ

ಹೊಸದಿಲ್ಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 57,117 ಕೊರೋನಾ ಪಾಸಿಟಿವ್ ವರದಿಗಳು ದಾಖಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಈವರೆಗೂ ದೇಶದಲ್ಲಿ 16,95,988 ಮಂದಿ ಸೋಂಕಿತರಿದ್ದು, ಇವರಲ್ಲಿ 5,65,203 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 10,94,374 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ 764 ಮಂದಿ ಕೊರೋನಾಗೆ ಬಲಿಯಾಗಿದ್ದು, ಒಟ್ಟಾರೆ 36,511 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಶುಕ್ರವಾರ ಒಂದೇ ದಿನ ಐಸಿಎಂಆರ್ 5,25,689 ಕೊರೋನಾ ಮಾದರಿಗಳ ಪರೀಕ್ಷೆ ನಡೆಸಿದ್ದು, ಈವರೆಗೂ 1.93,58,659 ಮಾದರಿಗಳ ಪರೀಕ್ಷೆಯನ್ನು ದೇಶಾದ್ಯಂತ ನಡೆಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss