Tuesday, August 16, 2022

Latest Posts

ಕಳೆದ 24 ಗಂಟೆಗಳಲ್ಲಿ 66,999 ಕೊರೋನಾ ಪ್ರಕರಣಗಳು: 16,95,982 ಮಂದಿ ಗುಣಮುಖ

ಹೊಸದಿಲ್ಲಿ: ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 66,999 ಪ್ರಕರಣಗಳು ವರದಿಯಾಗಿದ್ದು, 942 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಭಾರತದಲ್ಲಿ ಈವರೆಗೂ 23,96,638 ಕೊರೋನಾ ಸೋಂಕಿತರಿದ್ದು, 6,53,622 ಸಕ್ರಿಯ ಸೋಂಕಿತರು ವರದಿ ತಿಳಿಸಿದೆ. 16,95,982 ಮಂದಿ ಗುಣಮುಖರಾಗಿದ್ದು, 47,033 ಮಂದಿ ಬಲಿಯಾಗಿದ್ದಾರೆ.

ಮಹಾರಾಷ್ಟ್ರದಲ್ಲಿ 1,47,820 ಸಕ್ರಿಯ ಸೋಂಕಿತರಿದ್ದು, ಆಂಧ್ರ ಪ್ರದೇಶದಲ್ಲಿ 90,425 ಸಕ್ರಿಯ ಪ್ರಕರಣಗಳು ದಾಖಲಾಗಿದೆ.

ದೇಶದಲ್ಲಿ ಈವರೆಗೆ 2,68,45,688 ಕೊರೋನಾ ಮಾದರಿಗಳ ಪರೀಕ್ಷೆ ನಡೆಸಿದ್ದು, ಕಳೆದ 24 ಗಂಟೆಗಳಲ್ಲಿ 8,30,391 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ವರದಿ ತಿಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss