Wednesday, August 10, 2022

Latest Posts

ಕಳೆದ 72 ಗಂಟೆಗಳಲ್ಲಿ ಟೆಲಿಗ್ರಾಂ ಕದತಟ್ಟಿದ ಬರೋಬ್ಬರಿ 25 ಮಿಲಿಯನ್ ಬಳಕೆದಾರರು!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕಳೆದ 72 ಗಂಟೆಗಳಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಂಗೆ  ಬರೋಬ್ಬರಿ 25 ಮಿಲಿಯನ್
ಹೊಸ ಬಳಕೆದಾರರು ಸೇರಿಕೊಂಡಿದ್ದಾರೆ.
ಈ ಬಗ್ಗೆ ಖುದ್ದು ಸಂಸ್ಥೆಯೇ ಹೇಳಿಕೆ ನೀಡಿದ್ದು, ಆಗಮಿಸಿದ ಎಲ್ಲಾ ಹೊಸ ಬಳಕೆದಾರರಿಗೂ ಸ್ವಾಗತ ಎಂದಿದೆ.
ರಷ್ಯಾ ಮೂಲದ ಈ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಂ, ಈ ವರ್ಷದ ಮೊದಲ ವಾರದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನ ಹೊಂದಿತ್ತು. ಇದೀಗ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.
ಎರಡು ಶತಕೋಟಿ ಬಳಕೆದಾರರನ್ನ ಹೊಂದಿರುವ ವಾಟ್ಸ್ಸ್‌ಆಪ್ ತನ್ನ ಷರತ್ತು ಹಾಗೂ ನಿಯಮಗಳಲ್ಲಿ ಮಾಡಿಕೊಂಡ ಬದಲಾವಣೆಗಳ ಬಳಿಕ ಸೃಷ್ಟಿಯಾದ ವಿವಾದಗಳು ಈಗ ಅದಕ್ಕೇ ಮುಳುವಾಗುತ್ತಿದ್ದು, ಬಳಕೆದಾರರು ಒಬ್ಬೊಬ್ಬರಾಗಿಯೇ ಇದರಿಂದ ಹೊರತೆರಳುತ್ತಿರುವುದು ಸ್ಪಷ್ಟವಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss