Wednesday, August 10, 2022

Latest Posts

ಕಸ್ತೂರಿ ಮಹಲ್ ನಿಂದ ಹೊರಗೆ ಬಂದ ಡಿಂಪಲ್ ಕ್ವೀನ್ ರಚಿತಾ, ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ

ಸ್ಯಾಂಡಲ್‌ವುಡ್ ನ ನಟಿ  ರಚಿತಾ ರಾಮ್ ಅಪ್‌ಡೇಟ್ ಮಾಹಿತಿ ಸಿಕ್ಕಿದೆ.  ಏನಾಪ್ಪ  ಅಂದರೆ  ಡಿಂಪಲ್ ಕ್ವೀನ್ ಬಹುನಿರೀಕ್ಷೆಯ

’ಕಸ್ತೂರಿ ಮಹಲ್’ ಸಿನಿಮಾದಿಂದ ಹೊರಗೆ ಬಂದಿದ್ದಾರಂತೆ.

ಲಾಕ್ ಡೌನ್ ಬಳಿಕ ಸಿನಿಮಾಗಳು ಕೆಲಸಗಲು ಸ್ಥಗಿತವಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ, ತಿಂಗಳ ಬಳಿಕ ಸಿನಿಮಾ ಕೆಲಸಗಳು ಪ್ರಾರಂ‘ವಾಗುತ್ತಿವೆ. ಈ ನಡುವೆ ರಚಿತಾ ರಾಮ್ ಅಭಿನಯದ ’ಕಸ್ತೂರಿ ಮಹಲ್’ ಸಿನಿಮಾ ಗ್ರ್ಯಾಂಡ್ ಆಗಿ ಲಾಂಚ್ ಆಗಿತ್ತು. ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ ೫೦ನೇ ಸಿನಿಮಾವಿದು. ಆದರೀಗ ರಚಿತಾ ಸಿನಿಮಾದಿಂದ ಹೊರನಡೆದ್ದಾರೆ ಎನ್ನುವ ಶಾಕಿಂಗ್ ಸುದ್ದಿ ಕೇಳಿ ಬರುತ್ತಿದೆ

ತುಂಬಾ ಪ್ರೀತಿಯಿಂದನೇ ಸಿನಿಮಾ ಒಪ್ಪಿಕೊಂಡು, ಸಿನಿಮಾದ ಬಗ್ಗೆ ಮಾತನಾಡಿದ್ದ ರಚಿತಾ ದಿಢೀರನೆ ಸಿನಿಮಾದಿಂದ ಹೊರನಡೆದಿರುವುದು ಅಚ್ಚರಿ ಮೂಡಿಸಿದೆ. ರಚಿತಾ ಈ ಸಿನಿಮಾಗೆ ಸಹಿ ಹಾಕುವಾಗ ಚಿತ್ರಕ್ಕೆ ’ಕಸ್ತೂರಿ ನಿವಾಸ’ ಎಂದು ಟೈಟಲ್ ಇಡಲಾಗಿತ್ತು. ಆದರೆ ಈ ಟೈಟಲ್ ಇಟ್ಟಾಗಿನಿಂದ ಸಿನಿಮಾ ವಿವಾದದ ಕೇಂದ್ರ ಬಿಂದುವಾಗಿತ್ತು. ಡಾ.ರಾಜ್ ಕುಮಾರ್ ನಟನೆಯ ಸುಪ್ರಸಿದ್ಧ ಸಿನಿಮಾದ ಹೆಸರನ್ನು ನಿರ್ದೇಶಕ ದಿನೇಶ್ ಬಾಬು ತನ್ನ ಬಳಸಿಕೊಂಡಿದ್ದರ ಬಗ್ಗೆ ರಾಜ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಟೈಟಲ್ ಬದಲಾಯಿಸುವಂತೆ ಅಭಿಮಾನಿಗಳು ನಿರ್ದೇಶಕರನ್ನು ಒತ್ತಾಯ ಮಾಡಿದ್ದರು. ಹೀಗಾಗಿ ನಿರ್ದೇಶಕ ದಿನೇಶ್ ಬಾಬು ಟೈಟಲ್ ಬದಲಾಯಿಸುವ ನಿರ್ಧಾರ ಮಾಡಿ ಚಿತ್ರಕ್ಕೆ ಕಸ್ತೂರಿ ಮಹಲ್ ಎಂದು ನಾಮಕರಣ ಮಾಡಿದರು. ಇನ್ನೇನು ಚಿತ್ರೀಕರಣ ಪ್ರಾರಂಭಿಸಬೇಕು ಎನ್ನುವಷ್ಟೊತ್ತಿಗೆ ರಚಿತಾ ಸಿನಿಮಾದಿಂದ ಬಂದಿದ್ದಾರೆ. ಇನ್ನು  ಈ  ಚಿತ್ರದ  ಬಗ್ಗೆ  ಮಾಹಿತಿಯನ್ನು  ಚಿತ್ರತಂಡವೇ  ತಿಳಿಸಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss