ಹಾಗಲಕಾಯಿ ಪಲ್ಯ ಕಹಿ ಎಂದು ಮಕ್ಕಳಷ್ಟೇ ಅಲ್ಲ, ದೊಡ್ಡವರೂ ತಿನ್ನುವುದಿಲ್ಲ. ಆದರೆ ಹಾಗಲಕಾಯಿ ಪಲ್ಯ ಕಹಿ ಇಲ್ಲದೆಯೂ ಮಾಡಬಹುದು. ಹಾಗಲಕಾಯಿಯ ಗುಣಗಳು ಎಲ್ಲರ ಆರೋಗ್ಯಕ್ಕೂ ಅವಶ್ಯಕ. ಹಾಗಾದರೆ ಕಹಿಯೇ ಇಲ್ಲದ ಹಾಗಲಕಾಯಿ ಪಲ್ಯ ಮಾಡುವುದು ಹೀಗೆ..
ಬೇಕಾಗುವ ಸಾಮಾಗ್ರಿಗಳು
ಹಾಗಲಕಾಯಿ
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಸಾಂಬಾರ್ ಪುಡಿ
ಖಾರದ ಪುಡಿ
ಬೆಲ್ಲ
ಉಪ್ಪು
ಎಣ್ಣೆ
ಮಾಡುವ ವಿಧಾನ
ಮೊದಲು ಹಾಗಲಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಎಣ್ಣೆ ಹಾಕಿ ಹುರಿದುಕೊಳ್ಳಿ. ಚೆನ್ನಾಗಿ ಹುರಿದರೆ ಇಲ್ಲೇ ಕಹಿ ಹೋಗಿಬಿಡುತ್ತದೆ.
ನಂತರ ಎಣ್ಣೆ ಹಾಕಿ ಒಗ್ಗರಣೆ ಹಾಕಿ ಇದಕ್ಕೆ ಹಸಿಮೆಣಸು, ಈರುಳ್ಳಿ ಹಾಕಿ ಹುರಿಯಿರಿ.
ಸ್ವಲ್ಪ ಬೆಂದ ನಂತರ ಟೊಮ್ಯಾಟೊ ಹಾಕಿ ಹಾಗಲಾಕಾಯಿ ಹಾಕಿ.
ನಂತರ ಈ ಮಿಶ್ರಣಕ್ಕೆ ಉಪ್ಪು,ಬೆಲ್ಲ,ಖಾರದಪುಡಿ ಹಾಗೂ ಸಾಂಬಾರ್ ಪುಡಿ ಹಾಕಿ ಸ್ವಲ್ಪ ಸಮಯ ಹುರಿದರೆ ಹಾಗಲಕಾಯಿ ಪಲ್ಯ ರೆಡಿ.