ಲಖನೌ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ಕುಟುಂಬಸ್ಥರನ್ನು ಭೇಟಿಯಾಗಲು ತೆರಳುತ್ತಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ವಶಕ್ಕೆ ಪಡೆಯಲಾಗಿದೆ.
ಹತ್ರಸ್ ಜಿಲ್ಲೆಯತ್ತ ತೆರಳಿದ್ದ ರಾಹುಲ್ ಮತ್ತು ಪ್ರಿಯಾಂಕಾ ಅವರಿದ್ದ ವಾಹನವು ಗಡಿಯನ್ನು ದಾಟಿದ ವೇಳೆ ಹತ್ರಸ್ನಿಂದ ಸುಮಾರು 142 ಕಿ.ಮೀ. ದೂರದಲ್ಲಿದ್ದ ಗ್ರೇಟರ್ ನೋಯ್ಡಾದಲ್ಲಿ ರಾಹುಲ್ – ಪ್ರಿಯಾಂಕಾ ಅವರ ಬೆಂಗಾವಲು ವಾಹನವನ್ನು ತಡೆಯಲಾಗಿದ್ದು ,ಬಳಿಕ ವಾಹನದಿಂದ ಕೆಳಗಿಳಿದು ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ಹತ್ರಸ್ ಜಿಲ್ಲೆಯತ್ತ ಸಾಗಿದ್ದು ಪೊಲೀಸರು ಬಂಧಿಸಿದ್ದಾರೆ.
ಬೃಹತ್ ಗುಂಪು ಇದ್ದುದರಿಂದ ಯಾವುದೇ ಕ್ಷಣದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಬಹುದು ಎಂದು ಅರಿತ ಪೊಲೀಸರು ಅವರನ್ನು ಅಲ್ಲಿಯೇ ತಡೆದು ಮುಂದುವರೆಯಲು ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ನೇತೃತ್ವದ ಗುಂಪು ರಸ್ತೆಯಲ್ಲಿಯೇ ಕುಳಿತುಕೊಂಡಿದ್ದಾರೆ.